ಹುಣಸೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಬಾಬೂಜಿ ಜಯಂತಿ ಸಮಾರಂಭವನ್ನು ಎಚ್.ಪಿ.ಮಂಜುನಾಥ್ ಉದ್ಘಾಟಿಸಿದರು. ದೇವರಾಜ್, ಪರಶುರಾಮ್, ಚಿಕ್ಕಸ್ವಾಮಿ, ಸೌಮ್ಯಾ ಇತರರಿದ್ದರು. 
ಮೈಸೂರು

ಮಹನೀಯರನ್ನು ಮರೆಯುತ್ತಿರುವ ಯುವ ಸಮೂಹ

ಹುಣಸೂರು : ದೇಶದ ಉನ್ನತ ಸ್ಥಾನವನ್ನು ಅಲಂಕರಿಸಿ ಭವ್ಯ ಭವಿಷ್ಯವನ್ನು ರೂಪಿಸಿದ ಮಹನೀಯರನ್ನು ನಾವು ಮರೆಯುತ್ತಿದ್ದೇವೆ ಎಂದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಬಾಬು ಜಗಜೀವನರಾಮ್ ಅವರ 119ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಾಪೂಜಿ, ಬಾಬಾ ಸಾಹೇಬ್ ಈ ದೇಶದ ಅಪ್ರತಿಮ ನಾಯಕರು. ಭವ್ಯ ಭಾರತದ ಭವಿಷ್ಯವನ್ನು ಬರೆದ ರೂವಾರಿಗಳು. ಆದರೆ ಇಂದಿನ ಯುವಸಮೂಹ ಈ ಎಲ್ಲ ನಾಯಕರ ಕುರಿತು ತಿಳಿದುಕೊಳ್ಳುತ್ತಿಲ್ಲ. ಈ ಎಲ್ಲ ಪ್ರಾಥ:ಸ್ಮರಣೀಯರನ್ನು ಮರೆಯುತ್ತಿದೆ. ಜಯಂತಿಗಳು ಆಯಾ ಸಮುದಾಯದ ಕಾರ್ಯಕ್ರಮವಾಗಿ ಮಾರ್ಪಾಡು ಹೊಂದುತ್ತಿರುವುದು ಕೂಡ ವಿಪರ್ಯಾಸ. ಜಯಂತಿ ಕಾರ್ಯಕ್ರಮದ ಮೂಲಕ ಮಹನೀಯರ ಸಾಧನೆಯನ್ನು ಆರ್ಥಮಾಡಿಕೊಂಡು ನಾವು ನಾಲ್ಕು ಜನರಿಗೆ ತಿಳಿಹೇಳುವ ಕಾರ್ಯ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಪಕ್ಷದ ತಾಲೂಕು ಕಾರ್ಯಾಧ್ಯಕ್ಷ ಗದ್ದಿಗೆ ದೇವರಾಜ್, ಮುಖಂಡರಾದ ಗಣಪತಿರಾವ್ ಇಂಡೋಲ್ಕರ್, ರವಿಪ್ರಸನ್ನ, ಬಾಲಸುಂದರ್, ಪ್ರೇಮ್‌ಕುಮಾರ್, ರಾಘು, ರಾಮೇಗೌಡ, ದಶನ್, ಫೈಸಲ್, ಪುಟ್ಟರಾಜು, ಎನ್.ಕೆ.ಮಹದೇವ್, ಚಿಕ್ಕಸ್ವಾಮಿ, ಜೆ.ಮಹದೇವ್, ಪರಶುರಾಮ್, ಸೌಮ್ಯಾ ಶ್ರೀನಿವಾಸ್, ಭೋಜ, ಶಂಕರ್, ನೇತ್ರಾವತಿ, ರಮೇಶ್, ಮಣಿ, ವಲ್ಲಿಯಮ್ಮ ಇತರರಿದ್ದರು.