ಇಎಂಆರ್‌ಸಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಲಿತಕಲಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಅನಿಟ ವಿಮ್ಲ ಬ್ರ್ಯಾಗ್ಸ್ ಅವರಿಗೆ ಬೀಳ್ಕೊಡುಗೆ, ಸಾಧಕರನ್ನು ಸನ್ಮಾನಿಸಲಾಯಿತು.
- ಎಲ್ಲ ಕ್ಷೇತ್ರಗಳಲ್ಲೂ ಮೈಸೂರಿನವರು ಹಾಗೂ ರಾಜ್ಯದವರು ಇನ್ನೂ ಹೆಚ್ಚಿನ ಸಾಧನೆ ಮಾಡಿ
- ಸಾಧಕರನ್ನು ಗುರುತಿಸಿ, ಗೌರವಿಸುವುದು ಒಳ್ಳೆಯದು.
ಮೈಸೂರು: ಮೈಸೂರಿನಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಸಾಕಷ್ಟು ಸೌಲಭ್ಯಗಳಿದ್ದು, ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಸಲಹೆ ನೀಡಿದರು.
ವಿಶ್ವಮಾನವ ಮೈಸೂರು ವಿಶ್ವವಿದ್ಯಾಲಯ ನೌಕರರ ವೇದಿಕೆ, ನವ ವಿಶ್ವಮಾನವ ಟ್ರಸ್ಟ್ ಸಹಯೋಗದಲ್ಲಿ ಮಾನಸ ಗಂಗೋತ್ರಿ ಇಎಂಆರ್‌ಸಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಲಲಿತಕಲಾ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದ ಪ್ರೊ.ಅನಿಟ ವಿಮಲ ಬ್ರ್ಯಾಗ್ಸ್ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲ ಕ್ಷೇತ್ರಗಳಲ್ಲೂ ಮೈಸೂರಿನವರು ಹಾಗೂ ರಾಜ್ಯದವರು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಸಾಧಕರನ್ನು ಗುರುತಿಸಿ, ಗೌರವಿಸುವುದು ಒಳ್ಳೆಯದು. ಅವರು ಇನ್ನೂ ಹೆಚ್ಚಿನ ಸಾಧನೆ ಮಾಡಲು ಇದರಿಂದ ಪ್ರೋತ್ಸಾಹ ದೊರೆಯುತ್ತದೆ ಎಂದರು.
ಪ್ರೊ.ಅನಿಟ ವಿಮಲ ಬ್ರ್ಯಾಗ್ಸ್ ಮಾತನಾಡಿ, ನಾನು ಮಹಾರಾಜ, ಮೈವಿವಿ ಸಂಜೆ ಕಾಲೇಜು ಹಾಗೂ ಲಲಿತಕಲಾ ಕಾಲೇಜಿನ ಪ್ರಾಂಶುಪಾಲೆಯಾಗಿ ಕೆಲಸ ಮಾಡಿದ್ದು, ಆಂಗ್ಲ ಭಾಷೆಯ ಪ್ರಾಧ್ಯಾಪಕಿಯಾಗಿ ಈ ಮೂರರ ಜತೆಗೆ ಯುವರಾಜ ಕಾಲೇಜಿನಲ್ಲಿ ಕೂಡ ಕೆಲಸ ಮಾಡಿದ್ದೇನೆ. ಭಾಷಾ ಅಧ್ಯಾಪಕರಿಗೆ ಇದೊಂದು ರೀತಿಯ ವರ. ನಾನು ನನ್ನ ಸೇವಾವಧಿಯಲ್ಲಿ ಸದ್ದಿಲ್ಲದೇ ಕೆಲಸ ಮಾಡಿದ್ದೇನೆ. ಆದರೆ, ನಾನು ಕಲಿಸಿದ್ದಕ್ಕಿಂತ ವಿದ್ಯಾರ್ಥಿಗಳಿಂದ ಕಲಿತಿದ್ದೇ ಹೆಚ್ಚು ಎಂದು ವಿನಮ್ರವಾಗಿ ಹೇಳಿದರು.
ವಿವಿ ಹಣಕಾಸು ಅಧಿಕಾರಿ ಕೆ.ಎಸ್.ರೇಖಾ, ಗಾಂಧಿ ಭವನದ ನಿವೃತ್ತ ನಿರ್ದೇಶಕ ಪ್ರೊ.ಎಸ್. ಶಿವರಾಜಪ್ಪ, ಸಿಂಡಿಕೇಟ್ ಸದಸ್ಯರಾದ ಮಹದೇಶ, ಕ್ಯಾತನಹಳ್ಳಿ ನಾಗರಾಜು, ಪ್ರಾಧ್ಯಾಪಕರಾದ ಡಾ.ಎಂ.ಎಸ್.ಸಪ್ನಾ, ಡಾ.ಎಚ್.ಪಿ. ಜ್ಯೋತಿ, ವೇದಿಕೆ ಅಧ್ಯಕ್ಷ ಆರ್. ವಾಸುದೇವ, ಕಾರ್ಯದರ್ಶಿ ವಿನೋದ್ ಇನ್ನಿತರರಿದ್ದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ವಿಜ್ಞಾನಿ ಡಾ.ಎಸ್.ಶ್ರೀಕಂಠಸ್ವಾಮಿ, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಎಂ.ಬಿ. ಸುರೇಶ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ವಿಜಯಲಕ್ಷ್ಮೀ ಮನಾಪುರ, ಡಾ.ಬಿ.ಕೆ. ಜ್ಞಾನಪ್ರಕಾಶ್, ಶಿಕ್ಷಣ ಮಂಡಳಿ ಸದಸ್ಯ ಸುರೇಶ್ ಪಾಳ್ಯ, ತಿಮ್ಮಯ್ಯ ಹಾಗೂ ಮೈವಿವಿ ಕ್ರೀಡಾ ವಿಭಾಗದ ಅಧಿಕಾರಿ ಬಿ.ಎಸ್. ರವಿ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಕ್ರೀಡಾ ಸ್ಪರ್ಧೆ ವಿಜೇತರಾದ ಪಿ.ಶಶಿಧರ್, ಎನ್. ಪ್ರಜ್ವಲ್, ಎಚ್.ಎನ್.ಚರಣ್, ದರ್ಶನ್ ಎಸ್.ಬೆಳಕೇರಿ, ಎಸ್.ಕೆ. ಚಲುವರಾಜು, ಆರ್.ಮಹೇಶ್, ಎಸ್.ಸಿ.ಸಾತ್ವಿಕ್, ಪ್ರತೀಕ್ ಎಸ್.ಪಾಟೀಲ್, ಟಿ.ಎಸ್.ಪವನ್, ಸಿ.ಆದಿತ್ಯ, ಪೃಥ್ವಿರಾಜ್, ಕೆ.ಆರ್. ಸುಭಾಷ್, ಕೆ.ಎಸ್. ರಕ್ಷಿತಾ, ಎಂ.ಅಮೂಲ್ಯ, ಎಸ್.ನಾಗಶ್ರೀ, ಎಂ. ಹಂಸಾ, ಚಂದನ ಗದ್ದಿ, ಎಸ್.ಎಂ.ನಂದಿನಿ, ಎ. ಪೃಥಿವ್, ಎನ್.ಸಿ. ಕೀರ್ತನಾ, ಐಶ್ವರ್ಯ, ಬಿ.ಸಿ.ನಯನಾ ಅವರನ್ನು ಸನ್ಮಾನಿಸಲಾಯಿತು.