ತಿ.ನರಸೀಪುರ ಪಟ್ಟಣದ ಹೆಳವರಹುಂಡಿ ಬಳಿ ಸೋಮವಾರ ಮಳವಳ್ಳಿಗೆ ತೆರಳುತ್ತಿದ್ದ ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ ರಥವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಮಂಜುನಾಥ್ ಬುದ್ಧಿ, ಸಿದ್ಧಪ್ಪ, ಪಿ.ನಟರಾಜ್, ಕುಮಾರಸ್ವಾಮಿ, ಸೋಮಶೇಖರಪ್ಪ, ಎಚ್.ಬಿ.ಚಿಕ್ಕನಂಜಯ್ಯ, ಮೂರ್ತಿ, ಎಸ್.ಕೆ.ಕಿರಣ ಇತರರು ಇದ್ದರು. 
ಮೈಸೂರು

ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಸುವರ್ಣ ರಥಕ್ಕೆ ಅದ್ದೂರಿ ಸ್ವಾಗತ

ಪ್ರಮುಖ ಮುಖ್ಯಾಂಶಗಳು

  • ಹೆಳವರಹುಂಡಿಯಲ್ಲಿ ಪುಷ್ಪವೃಷ್ಟಿಯೊಂದಿಗೆ ಬರಮಾಡಿಕೊಂಡ ಭಕ್ತರು
  • ಮಳವಳ್ಳಿಯಲ್ಲಿ ಆರಂಭವಾಗಿರುವ ಜಯಂತಿ ಮಹೋತ್ಸವ
ತಿ.ನರಸೀಪುರ: ಮಳವಳ್ಳಿ ಪಟ್ಟಣದಲ್ಲಿ ಸೋಮವಾರದಿಂದ 8 ದಿನ ಆಯೋಜಿಸಿರುವ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066 ಜಯಂತಿ ಮಹೋತ್ಸವಕ್ಕೆ ತೆರಳುತ್ತಿದ್ದ ಶಿವಯೋಗಿಗಳ ಸುವರ್ಣ ರಥವನ್ನು ಪಟ್ಟಣದಲ್ಲಿ ಮಂಗಳವಾದ್ಯದೊಂದಿಗೆ ಪುಷ್ಪವೃಷ್ಟಿಯೊಂದಿಗೆ ಬರಮಾಡಿಕೊಳ್ಳಲಾಯಿತು.
ಪಟ್ಟಣ ಪ್ರವೇಶದ್ವಾರ ಹೆಳವರಹುಂಡಿಯಲ್ಲಿ ಡೋಲು, ನಗಾರಿ ಶಬ್ದ ಭೋರ್ಗರೆಯಿತು. ವೀರಗಾಸೆಯೊಂದಿಗೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಆಗಮಿಸಿದ ರಥದಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಪುತ್ಥಳಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಹಾಗೂ ಮಾಲಾರ್ಪಣೆ ಮಾಡಲಾಯಿತು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮಳವಳ್ಳಿಯಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿಯನ್ನು ಡಿ.15 ರಿಂದ 22ರವರೆಗೆ ಹಮ್ಮಿಕೊಂಡಿದ್ದು, ಮಹೋತ್ಸವವನ್ನು ಯಶಸ್ವಿಗೊಳಿಸಲು ಮೈಸೂರು ಜಿಲ್ಲೆಯ ಎಲ್ಲ ತಾಲೂಕುಗಳಿಂದ ಶ್ರೀಗಳ ಭಕ್ತರು ಹಾಗೂ ಶರಣರು ಭಾಗವಹಿಸುವಂತೆ ಕೋರಿದರು.
ಎಂ.ಎಲ್.ಹುಂಡಿ ಮಠದ ಶ್ರೀ ಗೌರಿಶಂಕರ ಸ್ವಾಮೀಜಿ, ಹೊಸೂರುಹುಂಡಿ ಮಠದ ಶ್ರೀ ರಾಜಶೇಖರ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಮಂಜುನಾಥ್ ಬುದ್ಧಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ನಟರಾಜು, ಗುರುಸ್ವಾಮಿ, ಕುಮಾರ್, ಎಸ್.ಕೆ.ಕಿರಣ್, ತೊಟ್ಟವಾಡಿ ಮಹದೇವಸ್ವಾಮಿ, ರೂಪಶ್ರೀ ಪರಮೇಶ್, ಕೆ.ಎನ್.ಅಶೋಕ್, ಸಿ.ಎಂ.ಪ್ರಕಾಶ್, ನಿಂಗಪ್ಪ, ಮಾಯಪ್ಪ, ಎಚ್.ಬಿ.ಚಿಕ್ಕನಂಜಯ್ಯ, ಎಂ.ಕೆ.ಸಹದೇವ, ಶಿವಣ್ಣ, ಶಿವಪ್ರಸಾದ್, ಸಿದ್ದಲಿಂಗಸ್ವಾಮಿ , ಪರಮೇಶ್ ಪಟೇಲ್, ತೋಂಟೇಶ್, ಗುರುಸ್ವಾಮಿ, ಪಿ.ಸ್ವಾಮಿನಾಥ್ ಗೌಡ, ಹೋಟೆಲ್ ರಾಜಣ್ಣ, ಶಿವಕುಮಾರ್, ಕುಮಾರಸ್ವಾಮಿ, ಪ್ರಭುಸ್ವಾಮಿ, ಬಿ.ಮರಯ್ಯ, ಕೆ.ವಿ.ಶಿವಶಂಕರ್, ಅಜಯ್, ಸೋಮಶೇಖರಪ್ಪ, ಬಿ.ಮಂಟೇಲಿಂಗಪ್ಪ, ಮೂರ್ತಿ, ಎಂ.ಸುರೇಶ್, ಮಂಜುನಾಥ್, ಸೋಮಶೇಖರಪ್ಪ, ಅಕ್ಕಿನಾಗಪ್ಪ, ಬಿ.ಎಂ.ಅಜಯ್, ಬಿ.ಪಿ.ಪರಶಿವಮೂರ್ತಿ ಇತರರು ಇದ್ದರು.