ಬೆಟ್ಟದಪುರ ಸಮೀಪದ ಹುಣಸೆಕೊಪ್ಪಲು ಗ್ರಾಮದಲ್ಲಿ ಹಳ್ಳಿಕಾರ್ ತಳಿಯ ಎತ್ತುಗಳ ಭರ್ಜರಿ ಮೆರವಣಿಗೆ ಮಾಡುವ ಮೂಲಕ ಗ್ರಾಮಸ್ಥರು ಸಂಭ್ರಮಿಸಿದರು. ಕೆ.ಮಹದೇವ್, ಪಿ.ಎಂ.ಪ್ರಸನ್ನ, ಅಣ್ಣಯ್ಯಶೆಟ್ಟಿ, ಗಗನ್ ಇದ್ದರು.
- ಹುಣಸೆಕೊಪ್ಪಲು ಗ್ರಾಮದಲ್ಲಿ ಹಳ್ಳಿಕಾರ್ ತಳಿಯ ಎತ್ತು(ಹೋರಿ)ಗಳ ಭರ್ಜರಿ ಮೆರವಣಿಗೆ
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹುಣಸೆಕೊಪ್ಪಲು ಗ್ರಾಮದಲ್ಲಿ ಶನಿವಾರ ಸಂಜೆ ಹಳ್ಳಿಕಾರ್ ತಳಿಯ ಎತ್ತು(ಹೋರಿ)ಗಳ ಭರ್ಜರಿ ಮೆರವಣಿಗೆ ಮಾಡುವ ಮೂಲಕ ಗ್ರಾಮಸ್ಥರು ಸಂಭ್ರಮಿಸಿದರು.
ಗ್ರಾಮದ ಮನು (ಭೈರ) ಅವರ ಸುಮಾರು 2.5 ಲಕ್ಷ ರೂ. ಮೌಲ್ಯದ ಎತ್ತು(ಹೋರಿ)ಗಳಾಗಿದ್ದು, ಹೇಮಗಿರಿಯಲ್ಲಿ ನಡೆಯುತ್ತಿರುವ ಜಾತ್ರೆಗೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲ ಒಗ್ಗೂಡಿ ವಾದ್ಯಮೇಳದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಪ್ರತಿ ಮನೆಯವರು ಎತ್ತು(ಹೋರಿ)ಗಳಿಗೆ ಆರತಿ ಬೆಳಗಿ, ಆಹಾರ ನೀಡಿ ಶುಭಕೋರಿದರು. ಮಾಜಿ ಶಾಸಕ ಕೆ.ಮಹದೇವ್, ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ ಪ್ರಸನ್ನ, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಯುವ ಮುಖಂಡ ಗಗನ್ ಮೆರವಣಿಗೆಯಲ್ಲಿ ಭಾಗಿಯಾಗಿ, ಹಳ್ಳಿಕಾರ್ ಹಾಗೂ ಆಚರಣೆ ಸಂತಸ ವ್ಯಕ್ತಪಡಿಸಿದರು. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಇದ್ದರು.