ಶ್ರೀರಾಮಕೃಷ್ಣ ಆಶ್ರಮದ ವತಿಯಿಂದ ಗುರುವಾರ ಸಂಜೆ ನಡೆದ ದಿವ್ಯತ್ರಯರ ಭವ್ಯ ಮೆರವಣಿಗೆ ಗಮನ ಸೆಳಯಿತು.
ಮೈಸೂರು: ನಗರದಲ್ಲಿ ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ಇತರ ಸೇವೆ ಸಲ್ಲಿಸುತ್ತಿರುವ ಶ್ರೀರಾಮಕೃಷ್ಣ ಆಶ್ರಮ 100 ವರ್ಷ ಪೂರೈಸಿದ್ದು, ನ.21ರಿಂದ ನಾಲ್ಕು ದಿನ ಶತಮಾನೋತ್ಸವ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಸಂಜೆ ನಡೆದ ದಿವ್ಯತ್ರಯರ ಭವ್ಯ ಮೆರವಣಿಗೆ ಗಮನ ಸೆಳೆಯಿತು.
ಆಶ್ರಮದ ಸುಮಾರು 50 ಸಾಧು- ಸನ್ಯಾಸಿಗಳ ನೇತೃತ್ವದಲ್ಲಿ ದಿವ್ಯತ್ರಯರ ಭಾವಚಿತ್ರವನ್ನು ಒಳಗೊಂಡ ಪಲ್ಲಕ್ಕಿ ಉತ್ಸವ, ಸ್ವಾಮಿ ವಿವೇಕಾನಂದರ ರಥ, ರಾಮಕೃಷ್ಣ ಭಾವಚಿತ್ರವನ್ನು ಒಳಗೊಂಡ ಸಾರೋಟ್ ಮೂಲಕ ಭವ್ಯ ಮೆರವಣಿಗೆಯು ಭವ್ಯ ಮೆರವಣಿಗೆ ನೆರವೇರಿತು.
ನಗರದ ವಿವಿ ಮೊಹಲ್ಲಾದಲ್ಲಿರುವ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯು ಆಶ್ರಮದವರೆಗೆ ನಡೆಯಿತು.
ಮೆರವಣಿಗೆಯಲ್ಲಿ ಹಲವು ಭಜನ ತಂಡಗಳು ಭಗವಾನ್ ನಾಮ ಸಂಕೀರ್ತನೆಯನ್ನು ನಡೆಸಿಕೊಟ್ಟರು. ನೂರಾರು ಜನ ಸದ್ಭಕ್ತರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಶ್ರೀ ರಾಮಕೃಷ್ಣ ಆಶ್ರಮದವರೆಗೆ ಭಗವಂತನ ನಾಮ ಸಂಕೀರ್ತನೆಯೊಂದಿಗೆ ಸಾಗಿ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗದೊಂದಿಗೆ ಮೆರವಣಿಗೆ ಸಮಾಪ್ತಿಗೊಂಡಿತು.
ಮೈಸೂರು ರಾಮಕೃಷ್ಣ ಆಶ್ರಮ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ, ಸ್ವಾಮಿ ಯುಕ್ತೇಶಾನಂದ, ಸ್ವಾಮಿ ಜ್ಞಾನಯೋಗನಂದ, ಸ್ವಾಮಿ ಮುಕ್ತಿಪದಾನಂದ, ತುಮಕೂರು ರಾಮಕೃಷ್ಣ ಆಶ್ರಮದ ಅಧ್ಷಕ್ಷ ಸ್ವಾಮಿ ವೀರೇಶಾನಂದ, ಸ್ವಾಮಿ ಅನೂಪಮನಂದ, ಸ್ವಾಮಿ ಆತ್ಮಶ್ರದ್ದಾನಂದ ಹಿರಿಯ ಸಾಧು ಸಂತರರು ಉಪಸ್ಥಿತರಿದ್ದರು.