ನಗರದ ಮಹಾದೇಶ್ವರ ಸಭಾಂಗಣದಲ್ಲಿ ಗರಳಪುರಿ ಉತ್ಸವ ಅಂಗವಾಗಿ ಆಯೋಜಿಸಿದ್ದ ರೀಲ್ಸ್ ಸ್ಪರ್ಧೆ ಕಾರ್ಯಕ್ರಮವನ್ನು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಉದ್ಘಾಟಿಸಿದರು. ನಂದಕುಮಾರ್, ಕೆ.ಮಾರುತಿ, ಸಿ.ಎಂ.ಶಂಕರ್, ವಿಜಯಕುಮಾರ್ ಇತರರು ಇದ್ದರು.  
ಮೈಸೂರು

ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಉತ್ತಮ ವೇದಿಕೆ

ನಂಜನಗೂಡು: ಸಾಮಾಜಿಕ ಜಾಲತಾಣವು ಬಳಕೆದಾರರಿಗೆ ಉತ್ತಮ ವೇದಿಕೆಯಾಗಿದ್ದು, ರೀಲ್ಸ್ ಮೂಲಕ ಮಾಹಿತಿ, ಮನರಂಜನೆ ಜನರನ್ನು ಬೇಗ ತಲುಪುತ್ತಿದೆ ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ತಿಳಿಸಿದರು.
ನಗರದ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಮಹದೇಶ್ವರ ಸಭಾಂಗಣದಲ್ಲಿ ಗುರುವಾರ ಗರಳಪುರಿ ಉತ್ಸವ ಅಂಗವಾಗಿ ಏರ್ಪಡಿಸಿದ್ದ ರೀಲ್ಸ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ ಅವರ ದೂರದೃಷ್ಟಿಯಿಂದ ಹಾಗೂ ಶ್ರೀಕಂಠೇಶ್ವರ ಸ್ವಾಮಿ ದೊಡ್ಡ ಜಾತ್ರೆ ಹಿನ್ನೆಲೆಯಲ್ಲಿ ಗರಳಪುರಿ ಉತ್ಸವ ಏರ್ಪಡಿಸಲಾಗಿದೆ. ಇದೇ ತಿಂಗಳ 21ರಿಂದ 29 ರವರೆಗೆ ಹಲವು ವೈವಿಧ್ಯ ಕಾರ್ಯಕ್ರಮಗಳನ್ನ ಆಯೋಜಿಸಿದ್ದು, ಇದು 5ನೇ ದಿನದ ಕಾರ್ಯಕ್ರಮವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವವರಿಗೆ ಈ ಕಾರ್ಯಕ್ರಮ ಒಂದು ಉತ್ತಮ ವೇದಿಕೆಯಾಗಿದೆ. 29ರ ಕೊನೆಯ ದಿನ ರಸಮಂಜರಿ ಕಾರ್ಯಕ್ರಮದ ಜತೆಗೆ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ಪ್ರತಿದಿನವೂ ನಡೆದಿರುವ ಕಾರ್ಯಕ್ರಮಗಳಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನ್ನು ಶಾಸಕ ದರ್ಶನ್ ಧ್ರುವನಾರಾಯಣ ನೇತೃತ್ವದಲ್ಲಿ ವಿತರಿಸಲಾಗುತ್ತದೆ. ಮಾ.30ರಂದು ನಡೆಯುವ ಗೌತಮ ಪಂಚ ಮಹಾ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೊಡ್ಡ ಜಾತ್ರೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಬಳಿಕ ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್ ಮಾತನಾಡಿ, ಗರಳಪುರಿ ಉತ್ಸವ ಒಂದು ವಿಶೇಷ ಕಾರ್ಯಕ್ರಮವಾಗಿದೆ. ರೈತರು, ಕಲಾವಿದರು, ಜನಪದ ಕಲಾವಿದರು, ಕ್ರೀಡಾಪಟುಗಳು ಸೇರಿದಂತೆ ಬಹುಮುಖ ಪ್ರತಿಭೆಗಳಿಗೆ ಒಂದು ಉತ್ತಮ ವೇದಿಕೆಯಾಗಿದೆ. ಇಂತಹ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ತಿಳಿಸಿದರು.
ಇದೇ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಘಟಕದ ತಾಲೂಕು ಅಧ್ಯಕ್ಷ ಕರಳಾಪುರ ವಿಜಯಕುಮಾರ್, ಕಾರ್ಯಕ್ರಮದಲ್ಲಿ ಪ್ರದರ್ಶನ ತೋರಿದ ಎಲ್ಲರಿಗೂ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿಎಂ ಶಂಕರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ಮಾರುತಿ, ಮಾಜಿ ಅಧ್ಯಕ್ಷ ಶ್ರೀಧರ್, ಗಾಯತ್ರಿ ಮೋಹನ್, ಶಶಿರೇಖಾ, ಭಾಗ್ಯಾ, ಆದರ್ಶ, ಗೋವಿಂದರಾಜು, ಕರಳಪುರ ನಾಗರಾಜು, ಬಸವರಾಜು, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕರಳಾಪುರ ವಿಜಯಕುಮಾರ್, ಯುವ ಕಾಂಗ್ರೆಸ್ ಘಟಕದ ಬ್ಲಾಕ್ ಅಧ್ಯಕ್ಷ ಹೆಗ್ಗಡಹಳ್ಳಿ ಮಹೇಶ್, ಜಿಲ್ಲಾ ಯುವ ಕಾಂಗ್ರೆಸ್ ಗ್ರಾಮಾಂತರ ಕಾರ್ಯದರ್ಶಿ ವಿಜಯಕುಮಾರ್, ತಾಲೂಕು ಯುವ ಪ್ರಧಾನ ಕಾರ್ಯದರ್ಶಿ ಬ್ಯಾಳಾರಹುಂಡಿ ರವಿ, ಹುಲ್ಲಹಳ್ಳಿ ಬ್ಲಾಕ್ ಉಪಾಧ್ಯಕ್ಷ ಸಿದ್ದರಾಜು, ಮಹಿಳಾ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಪೂಜಾಶ್ರೀ, ಬದನವಾಳು ಸೋಮು, ಲೋಕೇಶ್ ಶ್ರೀರಾಂಪುರ, ಸಂಜು ಶ್ರೀರಾಂಪುರ, ಮುಳ್ಳೂರು ಮಹೇಂದ್ರ, ಬೆಳಲೆ ಮಹೇಶ್, ಕುರಹಟ್ಟಿ ಜಗದೀಶ್, ರಾಹುಲ್, ಕಡಬೂರು ನಂದೀಶ್ ಭಾಗವಹಿಸಿದ್ದರು.