ಬೈಲುಕುಪ್ಪೆಯ ಒಂದನೇ ಕ್ಯಾಂಪ್‌ನ ಟಿಬೇಟಿಯನ್ನರು ಪ್ರಾರ್ಥನಾ ಮಂದಿರಕ್ಕೆ ಸುಣ್ಣ-ಬಣ್ಣ ಬಳಿದಿರುವುದು.
- ಟಿಬೆಟಿಯನ್ನರು ಹಾಗೂ ಬೌದ್ಧ ಸನ್ಯಾಸಿಗಳು
- ಗುಳ್ಳೆದ ಹಳ್ಳ, ಒಂದನೇ ಕ್ಯಾಂಪ್, ಆಲಮರದ ಕ್ಯಾಂಪ್, ಟಿಡಿಎಲ್ ಕ್ಯಾಂಪ್, ಲಾಮಾ ಕ್ಯಾಂಪ್, ಗೋಲ್ಡನ್
ಬೈಲುಕುಪ್ಪೆ: ಇಲ್ಲಿನ ಸುತ್ತಮುತ್ತಲಿನ ಟಿಬೆಟಿಯನ್ನರು ಹಾಗೂ ಬೌದ್ಧ ಸನ್ಯಾಸಿಗಳು ಸಡಗರ ಸಂಭ್ರಮದಿಂದ ಟಿಬೆಟಿಯನ್ ಹಬ್ಬವನ್ನು ಬುಧವಾರ ಆಚರಿಸಿದರು.
ಟಿಬೆಟಿಯನ್‌ನ ವಿವಿಧ ಕ್ಯಾಂಪ್‌ಗಳಾದ ಗುಳ್ಳೆದ ಹಳ್ಳ, ಒಂದನೇ ಕ್ಯಾಂಪ್, ಆಲಮರದ ಕ್ಯಾಂಪ್, ಟಿಡಿಎಲ್ ಕ್ಯಾಂಪ್, ಲಾಮಾ ಕ್ಯಾಂಪ್, ಗೋಲ್ಡನ್ ಟೆಂಪಲ್ನಲ್ಲಿ ಟಿಬೆಟಿಯನ್ನರು ಹೊಸ ಉಡುಪುಗಳನ್ನು ಧರಿಸಿ ಹಬ್ಬವನ್ನು ಸಂಭ್ರಮಿಸಿದರು.
ಕೆಲ ವರ್ಷಗಳ ಹಿಂದೆ ಕ್ಯಾಂಪ್‌ನ ಪ್ರತಿ ವಾಸದ ಮನೆ, ಆಯಾ ಕ್ಯಾಂಪ್‌ನ ದೇವಸ್ಥಾನಗಳಿಗೆ ಸುಣ್ಣ-ಬಣ್ಣ ಬಳಸಿ ಒಂದು ತಿಂಗಳು ನಿರಂತರವಾಗಿ ಹಬ್ಬವನ್ನು ಆಚರಿಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ 3 ಅಥವಾ 5 ದಿನ ಮಾತ್ರ ಹಬ್ಬ ಆಚರಿಸಲಾಗುತ್ತಿದೆ ಎಂದು ಟಿಡಿಎಲ್ ಕ್ಯಾಂಪ್‌ನ ಜಿಮ್ಮಿ ತಿಳಿಸಿದರು.
ಟಿಡಿಎಲ್ ಕ್ಯಾಂಪ್ ಸಮೀಪದ 9ನೇ ಕ್ಯಾಂಪ್‌ನ ಆಟದ ಮೈದಾನದಲ್ಲಿ ಹಬ್ಬದ ಪ್ರಯುಕ್ತ ವಿವಿಧ ಕ್ಯಾಂಪ್‌ನ ಟಿಬೆಟಿಯನ್ ಯೂತ್ ಕಾಂಗ್ರೆಸ್, ಟಿಬೆಟಿಯನ್ ಮಹಿಳಾ ಸಂಘ, ಶಾಲಾ ಮಕ್ಕಳಿಂದ ಟಿಬೆಟಿಯನ್ ಆಚಾರದಂತೆ ನಾಟಕ, ಮನರಂಜನೆ, ಆರ್ಕೆಸ್ಟ್ರಾ, ನಡೆಯಲಿವೆ ಎಂದು ಟಿಡಿಎಲ್ ಕಚೇರಿಯ ಮುಖ್ಯಸ್ಥ ತುಂಡುಪ್ ದೊರ್ಜಿ ತಿಳಿಸಿದರು.