ಪಿರಿಯಾಪಟ್ಟಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಕ್ರಿಕೆಟ್ ಪಂದ್ಯಾವಳಿಗೆ ಡಾ.ಬಿ.ಜೆ.ವಿಜಯಕುಮಾರ್ ಚಾಲನೆ ನೀಡಿದರು. ಅನಿಲ್ ಕುಮಾರ್, ಎಚ್.ಜಿ.ಪರಮೇಶ್, ಮಂಜು ಇತರರಿದ್ದರು. 
ಮೈಸೂರು

ಯುವ ಜನಾಂಗದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್‌ನ ಮೈಸೂರು ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್
  • ಚಿತ್ರನಟ ದರ್ಶನ್ ಹುಟ್ಟುಹಬ್ಬ
  • ಎಪಿಎಂಸಿ ಆವರಣ
ಪಿರಿಯಾಪಟ್ಟಣ: ಯುವ ಜನಾಂಗ ಸಂಘಟನಾತ್ಮಕವಾಗಿ ಸಿದ್ಧವಾದಲ್ಲಿ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಕಾಂಗ್ರೆಸ್‌ನ ಮೈಸೂರು ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಅಭಿಪ್ರಾಯಪಟ್ಟರು.
ಚಿತ್ರನಟ ದರ್ಶನ್ ಹುಟ್ಟುಹಬ್ಬ ಅಂಗವಾಗಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಅಭಿಮಾನಿಗಳು ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಜನರ ಎಲ್ಲ ಕೆಲಸ ಕಾರ್ಯಗಳು ಸರ್ಕಾರದಿಂದಲೇ ನಿರೀಕ್ಷಿಸುವುದು ಅಸಾಧ್ಯ. ಸಮಾಜದ ಅಭಿವೃದ್ಧಿಗೆ ಸಂಘ- ಸಂಸ್ಥೆಗಳು ಕೈಜೋಡಿಸಬೇಕು. ಅಲ್ಲದೆ ಸ್ವಯಂಸೇವಾ ಸಂಸ್ಥೆಗಳಿಂದ ಸಮಾಜಮುಖಿ ಕೆಲಸ, ಸಾಂಸ್ಕೃತಿಕ ಚಟುವಟಿಕೆ ನಡೆಸಿದರೆ ಸಾಂಸ್ಕೃತಿಕ ನಾಡನ್ನು ಕಟ್ಟಲು ಸಾಧ್ಯ ಎಂದರು.
ಕ್ರಿಕೆಟ್‌ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ಹಾಗೂರಕ್ತದಾನ ಮಾಡಿದ ಎಲ್ಲರಿಗೂ ಪ್ರಶಂಸನಾ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಎಚ್.ಜಿ.ಪರಮೇಶ್, ದರ್ಶನ್ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಮಂಜು, ಕೆ.ಆರ್.ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯೆ ತನುಜಾ ಮಹೇಶ್, ಮುಖಂಡರಾದ ಪಿ.ಮಹದೇವ್, ರಂಗಸ್ವಾಮಿ, ಲೋಹಿತ್, ಪಟೇಲ್ ಶ್ರೀನಿವಾಸ್, ಚಿಟ್ಟೇನಹಳ್ಳಿ ಸುರೇಶ್, ವಲ್ಲೀಶ್, ಗಿರೀಶ್, ಇತರರಿದ್ದರು. \