ತಿ.ನರಸೀಪುರ ಪಟ್ಟಣದ ಸೆಸ್ಕ್ ಉಪವಿಭಾಗದ ಕಚೇರಿಯ ಸಭಾಂಗಣದಲ್ಲಿ ನೌಕರರ ಸಂಘದ ಪ್ರಾಥಮಿಕ ಸಮಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ನಿರ್ದೇಶಕರನ್ನು ಅಭಿನಯಿಸಲಾಯಿತು. ಶಿವಾನಂದ, ಎಚ್.ಎಸ್.ಮಹದೇವಸ್ವಾಮಿ, ಸಿದ್ದರಾಜು, ಚಂದ್ರಕಲಾ, ಗೀತಾ ಇತರರು ಇದ್ದರು.
ತಿ.ನರಸೀಪುರ: ಪಟ್ಟಣದಲ್ಲಿ ಶನಿವಾರ ನಡೆದಂತಹ ಚುನಾವಣೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘದ ಪ್ರಾಥಮಿಕ ಸಮಿತಿಗೆ 7 ಜನ ನೂತನ ಆಯ್ಕೆಯಾದರು.
ಸೆಸ್ಕ್ ಉಪವಿಭಾಗದ ಕಚೇರಿಯ ಸಭಾಂಗಣದಲ್ಲಿ 2026-27ನೇ ತ್ರೈಮಾಸಿಕ ಮಹಾಧಿವೇಶನಕ್ಕೆ ಪ್ರಾಥಮಿಕ ಪ್ರತಿನಿಧಿ ಆಯ್ಕೆಗೆ ಬೆಳಗ್ಗೆಯಿಂದ ಸಂಜೆವರೆಗೂ ಮತದಾನ ನಡೆಯಿತು. ಸಂಜೆಯ ಬಳಿಕ ಮತ ಎಣಿಕೆ ನಡೆಸಲಾಯಿತು.
ಫಲಿತಾಂಶದಲ್ಲಿ ಶಿವಾನಂದ(50 ಮತ), ಎಚ್.ಎಸ್.ಮಹದೇವಸ್ವಾಮಿ(41), ಆರ್.ಮನೋಜ್ ಕುಮಾರ್(41), ಎಚ್.ಸಿದ್ದರಾಜು(36), ಚಂಗುಮಣಿ(37), ಎಸ್.ಮಧು(37) ಹಾಗೂ ಆರ್.ಡಿ.ನಾಗೇಂದ್ರ(36) ಗೆಲವು ಸಾಧಿಸಿದರು.
ಪ್ರತಿ ಸ್ಪರ್ಧಿಗಳಾಗಿದ್ದ ಬಿ.ಶಿವಕುಮಾರ್(36), ಬಾಬು ಸಾಬ್ ನದಾಫ್(36), ಎಸ್.ಬಸವರಾಜು(36), ವೀರೇಶ ಗಡ್ಡಿ(35), ಉಮೇಶ(35), ಸುಬ್ಬ ನಾಯಕ(28) ಹಾಗೂ ಸೋಮ(19) ಪರಭಾವಗೊಂಡರು.
ಸಂಘದಲ್ಲಿರುವ 84 ನೌಕರರಲ್ಲಿ 79 ನೌಕರರು ಮಾತ್ರ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಪ್ರತಿನಿಧಿಗಳ ಆಯ್ಕೆಗೆ ಮತದಾನ ಮಾಡಿದರು. ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿ, ವಿಜೇತರನ್ನು ಅಭಿನಂದಿಸಲಾಯಿತು.
ಚುನಾವಣಾಧಿಕಾರಿಯಾಗಿ ನಾಯಕ ಇಂಜಿನಿಯರ್ ಚಂದ್ರಕಲಾ ಕಾರ್ಯ ನಿರ್ವಹಿಸಿದರು. ಮಾಜಿ ಕೇಂದ್ರ ಸಮಿತಿ ಸದಸ್ಯ ಮಾದೇಶ್, ನಂಜನಗೂಡು ವೃತ್ತದ ಸಂಘಟನಾ ಕಾರ್ಯದರ್ಶಿ ಬಿ.ಕೆ.ರಘುಕುಮಾರ್, ಸ್ಥಳೀಯ ಸಮಿತಿಯ ಅಧ್ಯಕ್ಷ ರಜನಿಕಾಂತ್, ಉಪಾಧ್ಯಕ್ಷ ನಂದೀಶ್, ಸ್ಥಳೀಯ ಸಮಿತಿ ನಿರ್ದೇಶಕಿ, ಕಿರಿಯ ಇಂಜಿನಿಯರ್ ಗೀತಾ ಇತರರು ಇದ್ದರು.