ರಾಂಪುರದ ನಿವಾಸಿಯೊಬ್ಬರ ಮೊಬೈಲ್‌ಗೆ ಬಂದ ಸಂದೇಶ ನಂಬಿ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಅಪ್‌ಡೇಟ್ ಮಾಡಲು ಹೋಗಿ 5.13 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಮೊಬೈಲ್ ನಂಬರ್‌ಗೆ ಎಸ್‌ಬಿಐ ಬ್ಯಾಂಕ್‌ನ ಲೋಗೋ ಇರುವ ನಂಬರ್‌ನಿಂದ ಸಂದೇಶ ಬಂದಿದ್ದು, ಬ್ಯಾಂಕ್ ಖಾತೆಗೆ ಆಧಾರ್ ಅಪ್‌ಡೇಟ್ ಆಗಿಲ್ಲ. ಕೂಡಲೇ ಮಾಡಿಕೊಳ್ಳದೆ ಇದ್ದರೆ ಬ್ಯಾಂಕ್ ಖಾತೆ ರದ್ದಾಗಲಿದೆ ಎಂಬ ಸಂದೇಶ ಬಂದಿದೆ. ಇದನ್ನು ನಂಬಿ ಮೊಬೈಲ್‌ಗೆ ಬಂದ ಲಿಂಕ್ ಮೂಲಕ ಕೆಲ ಮಾಹಿತಿಗಳನ್ನು ನೀಡಿ ಅಪ್‌ಡೇಟ್ ಮಾಡಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ಹಣ ವರ್ಗಾವಣೆಯಾಗಿದ್ದು, ವಂಚನೆಯಾಗಿರುವುದು ಗೊತ್ತಾಗಿದೆ. ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.