ಹುಣಸೂರು ತಾಲೂಕಿನ ಸೊಳ್ಳೆಪುರ ಅರಣ್ಯದಲ್ಲಿ ಬಿದ್ದ ಬೆಂಕಿ ನಂದಿಸುತ್ತಿರುವ ಅರಣ್ಯ ಸಿಬ್ಬಂದಿ. 
ಮೈಸೂರು

ಸೊಳ್ಳೇಪುರ ಅರಣ್ಯದ 25-30 ಎಕರೆ ಬೆಂಕಿಗಾಹುತಿ

ಪ್ರಮುಖ ಮುಖ್ಯಾಂಶಗಳು

  • ಸೊಳ್ಳೇಪುರ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳ ಕೃತ್ಯ
ಹನಗೋಡು: ಹನಗೋಡು ಹೋಬಳಿಯ ಸೊಳ್ಳೇಪುರ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ಸುಮಾರು 25-30 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.
ಹುಣಸೂರು-ಎಚ್.ಡಿ.ಕೋಟೆ ಮುಖ್ಯ ರಸ್ತೆ ಹೊಸೂರು ಗೇಟ್ ಬಳಿಯ ಹುಣಸೆಕಟ್ಟೆ ಹಳ್ಳದ ಟಿಬೆಟ್ ಕ್ಯಾಂಪ್ ಬಳಿಯಲ್ಲಿ ಭಾನುವಾರ ಮಧ್ಯಾಹ್ನ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಸೊಳ್ಳೇಪುರ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅರಣ್ಯ ಪ್ರದೇಶದಲ್ಲಿ ಮೂರು ವರ್ಷಗಳ ಹಿಂದೆ ಅರಣ್ಯ ಇಲಾಖೆ ವತಿಯಿಂದ ಬೆಳೆಸಿದ್ದ ಹಣ್ಣಿನ ಗಿಡ, ಬಿದಿರು ಸಸಿಗಳು ಸಹ ನಾಶವಾಗಿದೆ. ಅಲ್ಲದೆ ಅರಣ್ಯ ಪಕ್ಕದ ಜಮೀನಿನಲ್ಲಿ ಅಳವಡಿಸಿದ್ದ ನೀರು ಹಾಯಿಸುವ ಪೈಪ್‌ಗಳು ಸುಟ್ಟುಹೋಗಿದೆ. 
ಬೆಂಕಿ ಮಾಹಿತಿ ಮೇರೆಗೆ ಆರ್‌ಎಫ್‌ಒ ನಂದಕುಮಾರ್ ನೇತೃತ್ವದ 20ಕ್ಕೂ ಹೆಚ್ಚಿನ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಹಾಗೂ ಹೊಸೂರು ಗೇಟ್‌ನ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಗೋವಿಂದ ಹಾಗೂ ಸದಸ್ಯರು, ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಶಾಂತ್ ಸೇರಿದಂತೆ ಯುವಕರ ತಂಡ ಬೆಂಕಿ ನಂದಿಸಲು ನೆರವಾದರು. ಇಲ್ಲಿ ಸಾಕಷ್ಟು ಹುಲಿ ಕಾಟ ಇದ್ದುದರಿಂದ ಕಿಡಿಗೇಡಿಗಳು ಬೆಂಕಿ ಹಾಕಿರಬಹುದೆಂದು ಶಂಕಿಸಲಾಗಿದೆ.