ಅಪರಾಧ 
ಮೈಸೂರು

ಮೈಸೂರಿನಲ್ಲಿ 214 ಗ್ರಾಂ ಚಿನ್ನಾಭರಣ ಕಳವು

ಪ್ರಮುಖ ಮುಖ್ಯಾಂಶಗಳು

  • ಮನೆಯ ಮುಖ್ಯ ಬಾಗಿಲು ಮೀಟಿ ಒಳ ನುಗ್ಗಿ ಕಳವು
  • ಬೀರು ನೋಡಿದಾಗ ಚಿನ್ನಾಭರಣ ನಾಪತ್ತೆ

ಮೈಸೂರು:

ತಾಲೂಕಿನ ಭುಗತಗಳ್ಳಿಯ ಐ ಬಿಲ್ಡಿಂಗ್ ಎನ್ ಕ್ಲೇವ್ ಲೇಔಟ್‌ನಲ್ಲಿ ಮನೆಯ ಬಾಗಿಲು ಮೀಟಿ ಚಿನ್ನಾಭರಣ ದೋಚಲಾಗಿದೆ.

ಬಡಾಣೆಯ ಹರ್ಷಿತ್ ಮೂರ್ತಿ ಅವರ ಮನೆಯಲ್ಲಿ 214 ಗ್ರಾಂ ಚಿನ್ನಾಭರಣ ಕಳವಾಗಿದೆ ಎಂದು ಮೈಸೂರು ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಹರ್ಷಿತ್‌ಮೂರ್ತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರ ತಂದೆ, ತಾಯಿ ಮನೆಗೆ ಬೀಗ ಹಾಕಿ ಶನಿವಾರ ತೆರಳಿದ್ದರು. ಭಾನುವಾರ ಸಂಜೆ ವಾಪಸ್ ಬಂದು ನೋಡಿದಾಗ ಯಾರೋ ಮನೆಯ ಮುಖ್ಯ ಬಾಗಿಲು ಮೀಟಿ ಒಳಹೋಗಿರುವುದು ಕಂಡು ಬಂದಿದೆ. ಬಳಿಕ ಬೀರು ನೋಡಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ದಕ್ಷಿಣ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.