ಅಪರಾಧ 
ಮೈಸೂರು

ಸಂಶಯಾಸ್ಪದ 18 ವ್ಯಕ್ತಿಗಳ ತಪಾಸಣೆ

ಅವಿನಾಶ್ ಜೈನಹಳ್ಳಿ
ಮೈಸೂರು: ಮೈಸೂರನ್ನು ಮಾದಕವಸ್ತುಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ನಗರ ಪೊಲೀಸರು, ಅಕ್ರಮ ಮಾರಾಟ ಮತ್ತು ಸಾಗಣೆ ಮೇಲೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಪ್ರತಿದಿನ ನಗರಾದ್ಯಂತ ವ್ಯಾಪಕ ತಪಾಸಣೆ ಕೈಗೊಳ್ಳುತ್ತಿದ್ದು ಗುರುವಾರ ದಿನವಿಡೀ 61 ಲಾಡ್ಜ್, 22 ಪಿಜಿ, 41 ಪಾರ್ಕ್ ಸೇರಿದಂತೆ ಹೊರವಲಯದ ಗೋಡೌನ್, ಒಂಟಿ ಮನೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾದಕ ವಸ್ತು ಸೇವನೆ ಕುರಿತಂತೆ 18 ಸಂಶಯಾಸ್ಪದ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಇಬ್ಬರು ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಇಬ್ಬರ ವಿರುದ್ಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ನಗರವನ್ನು ಮಾದಕವಸ್ತು ಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ‘ವಿಮುಕ್ತಿ’ ಅಭಿಯಾನದಡಿ ನಗರದ ಪ್ರಮುಖ ಪ್ರವಾಸಿ ತಾಣಗಳು, ಪಾರ್ಕ್‌ಗಳು ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಸಹಾಯವಾಣಿ ಮೊಬೈಲ್ ಸಂಖ್ಯೆ ಹೊಂದಿರುವ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಈ ಮೂಲಕ ಸಾರ್ವಜನಿಕರು ಯಾವುದೇ ರೀತಿಯ ಮಾದಕ ವಸು ್ತಗಳನ್ನು ಉಪಯೋಗಿಸದಂತೆ ಮತ್ತು ಮಾದಕ ವಸ್ತುಗಳನ್ನು ಮಾರಾಟ, ಸಾಗಣೆ, ಸೇವನೆ/ಬಳಕೆ ಮುಂತಾದ ಚಟುವಟಿಕೆ ಕಂಡು ಬಂದರೆ ತಕ್ಷ ಮಾಹಿತಿ ನೀಡುವಂತೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾನವಿ ಮಾಡಿದ್ದಾರೆ.