ಪಿರಿಯಾಪಟ್ಟಣ ತಾಲೂಕಿನ ನವಿಲೂರು ಡೇರಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಶಿವರಾಜ್ ಹಾಗೂ ವೆಂಕಟೇಶ್ ಅವರನ್ನು ಬೆಂಬಲಿಗರು ಅಭಿನಂದಿಸಿದರು. ಚೆಲುವರಾಜ್, ಮಹದೇವ್, ಜವರಯ್ಯ ಗೌರಮ್ಮ, ದೊಡ್ಡೇಗೌಡ, ಸ್ವಾಮಿ, ಜಯಮ್ಮ, ಜವರಯ್ಯ ಇತರರು ಇದ್ದರು.
ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ನವಿಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಶಿವರಾಜ್ ಹಾಗೂ ಕಾಂಗ್ರೆಸ್ ಬೆಂಬಲಿತ ವೆಂಕಟೇಶ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.
ಗ್ರಾಮದ ಡೇರಿ ಆವರಣದಲ್ಲಿ ಇತ್ತೀಚೆಗೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಶಿವರಾಜ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎನ್.ಎಸ್.ರೇವಣ್ಣ ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ವೆಂಕಟೇಶ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಚೆಲುವಯ್ಯ ನಾಮಪತ್ರ ಸಲ್ಲಿಸಿದ್ದರು.
ಜೆಡಿಎಸ್ ಬೆಂಬಲಿತ ಶಿವರಾಜ್ 7 ಮತ ಪಡೆದು ಅಧ್ಯಕ್ಷರಾದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಎನ್.ಎಸ್.ರೇವಣ್ಣ 6 ಮತ ಪಡೆದು ಪರಾಭವಗೊಂಡರು. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ವೆಂಕಟೇಶ್ 7 ಮತ ಪಡೆದು ಜಯಶೀಲರಾದರು. ಅವರ ಪ್ರತಿಸ್ಪರ್ಧಿ ಚಲುವಯ್ಯ 6 ಮತ ಪಡೆದು ಪರಾಭವಗೊಂಡರು.
ಸಹಕಾರ ಅಭಿವೃದ್ಧಿ ಅಧಿಕಾರಿ ಹಿತೇಂದ್ರ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ನವಿಲೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಗೌರಮ್ಮ, ದೊಡ್ಡೇಗೌಡ, ಸ್ವಾಮಿ, ಜಯಮ್ಮ, ಜವರಯ್ಯ, ಪಲ್ಲವಿ, ಎನ್.ಕೆ.ಅಶ್ವಿನಿ, ನಿಂಗರಾಜು, ಗ್ರಾಪಂ ಮಾಜಿ ಅಧ್ಯಕ್ಷರಾದ ಚನ್ನಪ್ಪ, ನವಿಲೂರು ಮಹಾದೇವ್, ಗ್ರಾಪಂ ಸದಸ್ಯ ಚೆಲುವರಾಜು, ಎನ್.ಡಿ.ಮಹದೇವ್, ಡೇರಿ ಮಾಜಿ ಅಧ್ಯಕ್ಷ ಶಿವರಾಜ್, ಶ್ರೀನಿವಾಸ್, ಮಾಜಿ ಕಾರ್ಯದರ್ಶಿ ಶಿವಪ್ಪ, ಗ್ರಾಮದ ಮುಖಂಡರಾದ ರಾಜಣ್ಣ, ಜವರಯ್ಯ, ನಿಂಗರಾಜು, ಸ್ವಾಮಿಗೌಡ, ಶಿವಣ್ಣ, ಪ್ರಕಾಶ್, ರೇವಣ್ಣ, ಚಂದ್ರಶೇಖರ್, ಸ್ವಾಮಿ, ಕಾಳೇಗೌಡ, ಚಂದ್ರೇಗೌಡ, ರಾಜೇಗೌಡ, ದೇವರಾಜ್, ದಾಸಯ್ಯ, ವೆಂಕಟಯ್ಯ, ಎನ್.ಡಿ.ದೇವರಾಜು ಸಂಘದ ಕಾರ್ಯದರ್ಶಿ ರಾಜು ಇತರರು ಇದ್ದರು.