ಸರಗೂರು ತಾಲೂಕಿನ ಮುಳ್ಳೂರು ಗ್ರಾಮದಿಂದ ಬಿರ್ವಾಳ್ ಗ್ರಾಮದವರೆಗೂ ರಸ್ತೆ ಅಭಿವೃದ್ಧಿಗೆ ಶಾಸಕ ಅನಿಲ್ ಕುಮಾರ್ ಚಾಲನೆ ನೀಡಿದರು. ಚಿಕ್ಕವೀರನಾಯಕ, ಭಾಗ್ಯಲಕ್ಷ್ಮಿ, ಶಿವರಾಜು, ನವೀನ್ ಇತರರು ಇದ್ದರು.
ಸರಗೂರು: ತಾಲೂಕಿನ ಮುಳ್ಳೂರು ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲು ಪ್ರಯತ್ನ ನಡೆಸಲಾಗುವುದು ಎಂದು ಶಾಸಕ, ಅರಣ್ಯ ಮತ್ತು ವಸತಿ ವಿಹಾರ ಸಂಸ್ಥೆಗಳ ಅಧ್ಯಕ್ಷ ಅನಿಲ್ ಕುಮಾರ್ ತಿಳಿಸಿದರು.
ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಸೋಮವಾರ ಮುಳ್ಳೂರು-ಬಿರ್ವಾಳ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸರಗೂರು ಈ ಮೊದಲು ಹೋಬಳಿ ಕೇಂದ್ರವಾಗಿತ್ತು. ಆನಂತರ ಕೋಟೆಯಿಂದ ಬೇರ್ಪಟ್ಟು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲಾಯಿತು. ಹೀಗಾಗಿ ಸರಗೂರು ಹೋಬಳಿ ಕೇಂದ್ರವಾಗಿಯೇ ಇದೆ. ಆದ್ದರಿಂದ ಸರಗೂರು ಹೋಬಳಿ ಎಂಬುದನ್ನು ತೆಗೆದುಹಾಕಿ ಮುಳ್ಳೂರನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲು ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದರು.
ಪಿಯು ಕಾಲೇಜು: ಮುಳ್ಳೂರು ಈ ಭಾಗದ ಹತ್ತಾರು ಗ್ರಾಮಗಳಿಗೆ ಹೃದಯ ಭಾಗವಾಗಿದ್ದು, ಜನಸಂಖ್ಯೆಯೂ ಹೆಚ್ಚಿದೆ. ಇಲ್ಲಿಂದ ನೂರಾರು ವಿದ್ಯಾರ್ಥಿಗಳು ನಂಜನಗೂಡು, ಸರಗೂರು, ಹೆಡಿಯಾಲಕ್ಕೆ ಹೋಗುತ್ತಿರುವುದು ಗಮನಕ್ಕೆ ಬಂದಿದ್ದು, ಪಿಯು ಕಾಲೇಜು ಮಂಜೂರು ಮಾಡಿಸಲು ಶ್ರಮಿಸಲಾಗುವುದು. ಅಲ್ಲದೆ ಬ್ಯಾಂಕ್ ತೆರೆಯಲು ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಮುಳ್ಳೂರು ಗ್ರಾಮವನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು. ಮಡಿವಾಳರ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ನೀಡಲಾಗುವುದು. ಜತೆಗೆ ಡಾ.ಅಂಬೇಡ್ಕರ್ ಸಮುದಾಯ ಭವನಕ್ಕೂ ಸಹಾಯಧನ ನೀಡಲಾಗುವುದು. ಇದಕ್ಕೂ ಮೊದಲು ಮುಳ್ಳೂರು ಗ್ರಾಮಕ್ಕೆ ಎಲ್ಲ ಸಮುದಾಯದ ಭವನ ಹಾಗೂ ಸಿಸಿ ರಸ್ತೆ ಸೇರಿದಂತೆ ಗ್ರಾಮದ ಸಮಗ್ರ ಅಭಿವೃದ್ಧಿಗೆ ಒಟ್ಟು 16 ಕೋಟಿ ರೂ. ವೆಚ್ಚದಲ್ಲಿ ಅನುದಾನವನ್ನು ನೀಡಲಾಗಿದೆ. ಜತೆಗೆ ಗ್ರಾಮಸ್ಥರಿಂದ ಮತ್ತೆ ಅನುದಾನದ ಬೇಡಿಕೆ ಬಂದಿದೆ. ಇದನ್ನೂ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ, ಜಿಪಂ ಅಧಿಕಾರಿಗಳು ರಸ್ತೆಗಳ ಇಕ್ಕೆಲಗಳಲ್ಲಿ ಬೆಳೆದಿರುವ ಜಂಗಲ್ ಕಟ್ಟಿಂಗ್ ಮಾಡಬೇಕು. ಹುಲಿ, ಚಿರತೆ ಹಾವಳಿ ಹೆಚ್ಚಾಗಿದ್ದರಿಂದ ಈ ರಸ್ತೆಯಲ್ಲಿ ಓಡಾಡಲು ಜನರಿಗೆ ಕಷ್ಟವಾಗಿದೆ. ನಾನೇ ಈ ರಸ್ತೆಯಲ್ಲಿ ಬರುವುದರಿಂದ ಜನರು ಯಾವ ರೀತಿಯಲ್ಲಿ ತಿರುಗಾಡುತ್ತಿದ್ದಾರೆ ಎಂದು ಭಯವಾಗುತ್ತಿದೆ. ಶೀಘ್ರ ಜಂಗಲ್ ಕಟ್ಟಿಂಗ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಗ್ರಾಮದಲ್ಲಿ ದುರಸ್ತಿಯಲ್ಲಿರುವ ಸರ್ಕಾರಿ ಶಾಲೆಯನ್ನು ಕೆಡವಿ ದೇವಸ್ಥಾನ ಕಾರ್ಯಕ್ಕೆ ಬಳಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಸಲಹೆ ನೀಡಿದರು. ಮುಳ್ಳೂರು ಪುಟ್ಟಸ್ವಾಮಿ ಮಾತನಾಡಿದರು.
ಜಿಪಂ ಸದಸ್ಯರಾದ ಭಾಗ್ಯಲಕ್ಷ್ಮಿ, ಚಿಕ್ಕವೀರನಾಯಕ, ಶಿವಪ್ಪಕೋಟೆ, ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಅಜರುದ್ದೀನ್, ಮಸಹಳ್ಳಿ ನವೀನ್, ಮನುಗನಹಳ್ಳಿ ಗುರುಸ್ವಾಮಿ, ಬಿರ್ವಾಳ್ ಚಿಕ್ಕಣ್ಣ, ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಕಳಸೂರು ಬಸವರಾಜು, ಚನ್ನೀಪುರ ನಾಗರಾಜು, ಕುಂದೂರು ಮೂರ್ತಿ, ಗ್ರಾಪಂ ಅಧ್ಯಕ್ಷೆ ಚಿನ್ನಮ ರಾಮನಾಯಕ, ಸದಸ್ಯರಾದ ಡಿ.ಚಿನ್ನಸ್ವಾಮಿ, ಭಾಗ್ಯಾ ಶಿವಚನ್ನಪ್ಪ, ಚಿಕ್ಕನಾಯ್ಕ, ಶ್ರೀನಿವಾಸ , ಶಿವರಾಜು, ಚಂದ್ರ, ಶಿವನಾಗಪ್ಪ , ಶ್ರೀಕಂಠಪ್ಪ ಮುಖಂಡರಾದ ಶಂಭುಲಿಂಗನಾಯಕ, ಪುಟ್ಟಸ್ವಾಮಿ, ರವಿಕುಮಾರ್, ಲೋಕೇಶ್, ಮಂಜು, ಚನ್ನನಾಯಕ, ಮಹೇಶ್, ಚಿಕ್ಕಣ್ಣ, ವನಸಿರಿ ಉಮೇಶ್, ಶಶಿ ಪಾಟೀಲ್, ಶಿವನಾಪ್ಪ, ಶ್ರೀಕಂಠಪ್ಪ, ಮಹೇಶ್, ದಡದಹಳ್ಳಿ ಶಿವರಾಜು, ಮಹದೇವಯ್ಯ,ಮಧು,ಪ್ರಕಾಶ್, ಗುಣ, ಮಲ್ಲು ಇತರರು ಇದ್ದರು.