ಜಿಲ್ಲೆ

VIDEO: ಹಳೆಯ ವಿದ್ಯಾರ್ಥಿನಿ ಜತೆಗೆ ಪ್ರೈಮರಿ ಶಾಲಾ ಶಿಕ್ಷಕನ ಕಾಮ ಪುರಾಣ ಈಗ ವೈರಲ್​

ಮೈಸೂರು: ಮಕ್ಕಳ ಭವಿಷ್ಯಕ್ಕೆ ಬೆಳಕಾಬೇಕಿದ್ದ ಶಿಕ್ಷಕನೊಬ್ಬ ತನ್ನ ಹಳೆಯ ವಿದ್ಯಾರ್ಥಿನಿಯೊಬ್ಬಳ ಬಾಳನ್ನು ಕತ್ತಲೆಗೆ ನೂಕಿದ ಕರಾಳ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ರಾಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಮುಕ‌ ಶಿಕ್ಷಕ ಸಿದ್ದರಾಜು(58) 20ರ ಹರೆಯದ ಹಳೇ‌ ವಿದ್ಯಾರ್ಥಿನಿಯೊಂದಿಗೆ ಸರಸ ಸಲ್ಲಾಪವಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ಅಂದಹಾಗೆ ಆರೋಪಿ ಸಿದ್ದರಾಜು ಪಾರ್ಶ್ವವಾಯು ರೋಗದಿಂದ ಎರಡು ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಸುಮಾರು 25 ವರ್ಷಗಳಿಂದ ರಾಂಪುರ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ದಿವಂಗತ ಡಿ.ಟಿ.ಜಯಕುಮಾರ್ ಮಂತ್ರಿಯಾಗಿದ್ದ ಅವಧಿಯಲ್ಲಿ ಸಿದ್ದರಾಜು ಆಪ್ತ ಸಹಾಯಕನಾಗಿದ್ದ ಎಂದು ತಿಳಿದುಬಂದಿದೆ.

ಈ ಹಿಂದೆ ತನ್ನ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಯುವತಿಯನ್ನು ಹೇಗೋ ಪುಸಲಾಯಿಸಿ ಸಿದ್ದರಾಜು ಮಂಚಕ್ಕೆ ಕರೆದಿದ್ದಾನೆ. ಇಬ್ಬರ ನಡುವೆ ಅಕ್ರಮ ಸಂಬಂಧವು ಇದೆ ಎಂದು ಹೇಳಲಾಗಿದೆ. ಇನ್ನೊಂದೆಡೆ ಕಾಮುಕ ಶಿಕ್ಷಕನಿಗೆ ಈಗಾಗಲೇ ಎರಡು ಮದುವೆಯಾಗಿದ್ದು, ಇಬ್ಬರ ಹಂಡಿರ ಗಂಡನಾಗಿದ್ದಾನೆ.

ಇದೀಗ ತನ್ನ ಕಾಮಪುರಾಣದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಸಿದ್ದರಾಜು ನಾಪತ್ತೆಯಾಗಿದ್ದಾನೆ. ಇತ್ತ ಸಿದ್ದರಾಜು ವರ್ತನೆಯಿಂದ ಬೇಸತ್ತಿರುವ ಗ್ರಾಮಸ್ಥರು, ಶಿಕ್ಷಕನನ್ನು ಅಮಾನತು ಪಡಿಸುವಂತೆ ಆಗ್ರಹಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)