ಮಂಡ್ಯ: ಮೈಶುಗರ್ ಕಾರ್ಖಾನೆಯ ಬಾಯ್ಲರ್ ಗೆ ಪೂಜೆ ಸಲ್ಲಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಕ್ರೀಡಾ ಸಚಿವ ಕೆ ಸಿ.ನಾರಾಯಣಗೌಡ ಅಗ್ನಿ ಸ್ಪರ್ಶ ನೀಡಿದರು. ಇದರೊಂದಿಗೆ ನಾಲ್ಕು ವರ್ಷದ ನಂತರ ಕಾರ್ಖಾನೆ ಆರಂಭಗೊಂಡಿತು.
ಕೆ.ಗೋಪಾಲಯ್ಯ ಮಾತನಾಡಿ, ಮಂಡ್ಯ ಜಿಲ್ಲೆಯ ಮೈಶುಗರ್ ಕಾರ್ಖಾನೆ ಪ್ರಾರಂಭವಾಗಬೇಕು ಎಂಬುವಂತಹ ಆಶಯ ರೈತರಿಗಿತ್ತು. ಮುಖ್ಯ ಮಂತ್ರಿಗಳು ರೈತರಿಗೆ ಕಾರ್ಖಾನೆಯನ್ನು ಉಳಿಸಲು ಸ್ಪಂದಿಸಿದ್ದಾರೆ. ಇಂದು ಕಾರ್ಖಾನೆಗೆ ಪೂಜೆ ಸಲ್ಲಿಸಿ ಬಾಯ್ಲರ್ ಗೆ ಅಗ್ನಿ ಸ್ಪರ್ಶವನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಕಬ್ಬು ಅರೆಯುವಿಕೆಗೆ ಚಾಲನೆ ನೀಡಲಿದ್ದಾರೆ. ಅವರಿಗೆ ಜಿಲ್ಲೆಯ ರೈತರ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದರು. ಸಂಸದೆ ಸುಮಲತಾ, ಶಾಸಕ ಎಂ.ಶ್ರೀನಿವಾಸ್, ಜಿಲ್ಲಾಧಿಕಾರಿ ಎಸ್ ಅಶ್ವಥಿ, ಜಿ.ಪಂ ಸಿಇಒ ಶಾಂತ ಹುಲ್ಮನಿ ಇತರರಿದ್ದರು.