ಮಂಡ್ಯ: ಮೈಶುಗರ್ಕಾ ರ್ಖಾನೆ ಮುಂದಿನ ದಿನಗಳಲ್ಲಿ ನಷ್ಟದ ಹಾದಿಗೆ ಹೋಗದಂತೆ ರೈತರಿಗೆ ಪೂರಕವಾಗಿ ಕಾರ್ಯನಿರ್ವಹಿಸಲು ತಾಂತ್ರಿಕ ಹಾಗೂ ಹಣಕಾಸು ವರದಿ ಮಾಡಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ತಿಳಿಸಿದರು.
ನಗರದಲ್ಲಿರುವ ಕಾರ್ಖಾನೆಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ಬಳಿಕ ಮಾತನಾಡಿದ ಅವರು, ಸೆ.10ರೊಳಗೆ ಮುಖ್ಯಮಂತ್ರಿಗಳಿಂದ ಕಬ್ಬು ಅರೆಯುವಿಕೆಗೆ ಚಾಲನೆ ಕೊಡಿಸಲಾಗುವುದು. ಕಾರ್ಖಾನೆ ಆರಂಭದಿಂದ ಮಂಡ್ಯ ಜಿಲ್ಲೆಯ ರೈತರಲ್ಲಿ ಸಂತೋಷ ಮೂಡಲಿದೆ. ರೈತ ಹೋರಾಟಗಾರರ ಒತ್ತಾಯ ಹಾಗೂ ಆಶಯದಂತೆ ತಾಂತ್ರಿಕ ಸಮಿತಿ ರಚಿಸಿ ಅವರಿಂದ ವರದಿ ಪಡೆದು ಮೈ ಶುಗರ್ ಆರಂಭಿಸಲಾಗುತ್ತಿದೆ. ಅರಂಭಕ್ಕೆ ಅನುದಾನದ ಕೊರತೆ ಉಂಟಾಗದಂತೆ ಸಹ ನೋಡಿಕೊಳ್ಳಲಾಗಿದೆ. ಮೈಶುಗರ್ ಗೆ ಆ.31ರಂದು ಕಬ್ಬು ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು
ಮೈಶುಗರ್ ಪ್ರಧಾನ ವ್ಯವಸ್ಥಾಪಕ ಶಿವಾನಂದಮೂರ್ತಿ, ವ್ಯವಸ್ಥಾಪಕ ನಿರ್ದೇಶಕ ಪಾಟೀಲ ಅಪ್ಪಾ ಸಾಹೇಬಾ ಇತರರಿದ್ದರು.