ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದ ಶ್ರೀ ಸಿದ್ಧರಾಮ ಸ್ವಾಮೀಜಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಭುಲಿಂಗ ದೇವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗಿದೆ.
ಶಂಭುಲಿಂಗದೇವರು ಇತಿಹಾಸ ವಿಷಯದಲ್ಲಿ ಮಂಡಿಸಿದ ಸೋಷಿಯೋ-ಎಕನೋಮಿಕ್ ಕಂಡಿಷನ್ಸ್ ಇನ್ ಕನ್ನಡ ಡಿಸ್ಟ್ರಿಕ್ಟ್ಸ್ ಆ್ ಮುಂಬಯಿ ಪ್ರೆಸಿಡೆನ್ಸಿ ಎಂಬ ಪ್ರೌಢ ಪ್ರಬಂಧಕ್ಕೆ ಈ ಡಾಕ್ಟರೇಟ್ ಲಭಿಸಿದೆ.
ಅ.19 ರಂದು ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದ 100ನೇ ವರ್ಷದ ವಾರ್ಷಿಕ ಘಟಿಕೋತ್ಸವದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ ಅವರು ಶಂಭುಲಿಂಗದೇವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.