ಜಿಲ್ಲೆ

ಮೈಸೂರು: ಸದ್ವಿದ್ಯಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸದೇಶ್ ಕಾರ್ಮಾಡ್

ಮೈಸೂರು: ವಿಜಯನಗರದ ಸದ್ವಿದ್ಯಾ ಸೆಮಿ-ರೆಸಿಡೆನ್ಶಿಯಲ್ ಪದವಿ ಪೂರ್ವ ಕಾಲೇಜು ಇತ್ತೀಚೆಗೆ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋ ಜಿಸಲಾಗಿತ್ತು.

ದ್ವಿತೀಯ ಪಿಯುನಲ್ಲಿ ಅತ್ಯುನ್ನತದರ್ಜೆಯಲ್ಲಿ ತೇರ್ಗಡೆ ಹೊಂದಿದ 169 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಜ್ಞಾನ ವಿಭಾಗದಲ್ಲಿ ಶೇ.99 ರಷ್ಟು ಅಂಕಗಳೊಂದಿಗೆ ರಾಜ್ಯದಲ್ಲಿ 6 ನೇ ರ‌್ಯಾಂಕ್ ಪಡೆದ ಎಂ. ಸುದೀಕ್ಷಾ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ.99.3 ರಷ್ಟು ಅಂಕಗಳೊಂದಿಗೆ ರಾಜ್ಯ ಮಟ್ಟದಲ್ಲಿ 4ನೇ ರ‌್ಯಾಂಕ್ ಪಡೆದ ಜಿ. ಧಾತ್ರಿ ಅವರಿಗೆ ಬೆಳ್ಳಿ ಸ್ಮರಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭ ಕಾವೇರಿ ಚಾರಿಟೇಬಲ್ ಟ್ರಸ್ಟ್‌ನ ಪ್ರಾಂಶುಪಾಲರಾದ ಡಾ. ಜಿ. ಆರ್. ಕವಿತಾ, ಪ್ರಾಂಶುಪಾಲರು, ಕಾವೇರಿ ಚಾರಿಟೇಬಲ್ ಟ್ರಸ್ಟ್ ಸದಸ್ಯ ಆರ್.ಎಸ್. ಪ್ರಸನ್ನ, ಉಪಾಧ್ಯಕ್ಷ ಎಸ್. ಬಾಲಾಜಿ, ಕಾರ್ಯದರ್ಶಿ ಎಂ. ಡಿ. ಗೋಪಿನಾಥ್, ಅಧ್ಯಕ್ಷ ಪ್ರೊ.ಎಂ.ಎಸ್.ಕೆ. ನರಹರಿ ಬಾಬು, ಆಡಳಿತ ಮಂಡಳಿ ಸದಸ್ಯ ಸಿ. ಆರ್. ನಾಗರಾಜ್, ಜಂಟಿ ಕಾರ್ಯದರ್ಶಿ ಕೆ. ಎನ್. ಫಣಿಷ, ಉಪ ಪ್ರಾಂಶುಪಾಲ ಕೆ. ಎಸ್. ಪ್ರಕಾಶ್ ಇದ್ದರು.