ಜಿಲ್ಲೆ

ಮೈಸೂರು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದಿಂದ ಹಿರಿಯ ಪತ್ರಿಕಾ ವಿತರಕರಿಗೆ ಸನ್ಮಾನ

ಮೈಸೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ನಿವೃತ್ತ ಹಿರಿಯ ಪತ್ರಿಕಾ ವಿತರಕರನ್ನು ಮೈಸೂರು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದಿಂದ ಸನ್ಮಾನಿಸಲಾಯಿತು.

ನಗರದ ಚಿಕ್ಕಗಡಿಯಾರ ಬಳಿ ಶುಕ್ರವಾರ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ನಿವೃತ್ತ ಪತ್ರಿಕಾ ವಿತರಕಾದ ಶಾಂತಕುಮಾರ್(85), ಪ್ರಕಾಶ್(70), ಅಶ್ವಥ್ (72) ಅವರನ್ನು ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಜೆ.ಎಸ್.ಹೋಮದೇವ ಮಾತನಾಡಿ, ಬದಲಾದ ತಂತ್ರಜ್ಞಾನದಿಂದಾಗಿ ಪತ್ರಿಕೆ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ಅಲ್ಲದೆ ವಿತರಕರೂ ದೊರೆಯುತ್ತಿಲ್ಲ. ಹಾಗಾಗಿ ಪತ್ರಿಕಾ ವಿತರಕರಿಗೆ ಸಹಕಾರ ನೀಡುವ ಅಗ್ಯತ್ಯವಿದೆ ಎಂದರು.

ಮೈಸೂರು ಜಿಲ್ಲಾ ಪತ್ರಿಕಾ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎ.ರವಿ ಮಾತನಾಡಿ, ಪತ್ರಿಕಾ ವಿತರಕರನ್ನು ಗುರುತಿಸಿ ಗೌರವಿಸುವುದಕ್ಕಾಗಿ ಮುಂದಿನ ದಿನಗಳಲ್ಲಿ ಇಂತಹ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಸಂಘದ ಪದಾಧಿಕಾರಿಗಳಾದ ಎಂ.ನಾಗರಾಜು, ಸಿ.ಶಿವಣ್ಣ, ಟಿ.ಕೆ.ಎಸ್, ಸಿ.ಆರ್.ದತ್ತಾತ್ರೇಯ, ಈಶ್ವರಪ್ರಸಾದ್, ಶ್ರೀಕಾಂತ, ಜಯದೇವ್, ಸ್ವಾಮಿ, ನಂಜುಂಡಯ್ಯ, ಬಂ.ಶಿವಣ್ಣ, ಹರಿರಾವ್, ಆರಾಧ್ಯ, ವಿವಿಧ ಪತ್ರಿಕೆಗಳ ವಿತರಣಾ ವಿಭಾಗದ ವ್ಯವಸ್ಥಾಪಕರಾದ ಗಣೇಶ್, ಪ್ರತಾಪ್, ಸತೀಶ್, ಇನ್ನಿತರ ಪತ್ರಿಕಾ ವಿತರಕರು ಇದ್ದರು.