ವಿಜಯವಾಣಿ ಸುದ್ದಿಜಾಲ ದಾರವಾಡ
ನಗರದ ತಪೋವನ ಹತ್ತಿರದ ಕೆಲಗೇರಿಯ ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠದ ದ್ವಿತೀಯ ಪಿಯುಸಿ ಫಲಿತಾಂಶ ಶೇ. 100 ಆಗಿದೆ. 28 ವಿದ್ಯಾರ್ಥಿಗಳಲ್ಲಿ 12 ಜನ ಅತ್ಯುನ್ನತ ಶ್ರೇಣಿ, 15 ಜನ ಪ್ರಥಮ ದರ್ಜೆ, ಓರ್ವ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾನೆ.
ದಿವ್ಯಾ ಎಸ್. ಯಲಿಗಾರ ಶೇ. 98 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಡಿ.ಜಿ. ಶ್ರೇಯಸ್ ಗೌಡ ಶೇ. 96.17 ದ್ವಿತೀಯ, ಪೃಥ್ವಿ ಪರ್ವತಿ ಶೇ. 95.67 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾನೆ. ತೇಜಸ್ ಹೂಗಾರ ಶೇ. 95.17, ವಾಗೀಶ ಎಂ. ಹಿರೇಮಠ ಶೇ. 92.50, ಸುದೀಪ ದ್ಯಾವಪ್ಪನವರ ಶೇ. 90.83, ಸುಹಾಸ ಶರಣದವರ ಶೇ. 90.67, ನಿಽ ಗೋವನ್ನವರ ಶೇ. 89.83 ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಉತ್ತಮ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಚಾರ್ಯ, ಉಪನ್ಯಾಸಕರು ಮತ್ತು ಅವಂತಿ ಸಂಸ್ಥೆಯ ಸಿಬ್ಬಂದಿ ಅಭಿನಂದಿಸಿದ್ದಾರೆ.