ಜಿಲ್ಲೆ

ದಸರಾ ಉತ್ಸವದಲ್ಲಿ ಸಾಮಾಜಿಕ ನ್ಯಾಯ ಪಾಲಿಸಬೇಕು

Davangere - Desk - Mahesh Babu E

ಚಳ್ಳಕೆರೆ: ವಿಶ್ವ ವಿಖ್ಯಾತಿ ಮೈಸೂರು ದಸರಾ ಮಹೋತ್ಸವ ಆಚರಣೆಯಲ್ಲಿ ಆಯೋಜಿಸುವ ಕವಿಗೋಷ್ಠಿ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ವಸುಂಧರ ಶಿಕ್ಷಣ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಅಧ್ಯಕ್ಷ, ಕವಿ ಕೊರ‌್ಲಕುಂಟೆ ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಅವರು, ಮೈಸೂರು ರಾಜಪ್ರಭುತ್ವದ ಆಡಳಿತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ವಿಶೇಷ ಮನ್ನಣೆ ಇದೆ. ಅವರನ್ನು ಮೀಸಲಾತಿ ಜನಕ ಎಂದೇ ಕರೆಯಲಾಗುತ್ತದೆ. ಅವರ ಆದರ್ಶಗಳನ್ನು ಕಾರ್ಯಕ್ರಮದಲ್ಲಿ ಅನುಷ್ಠಾನಗೊಳಿಸುವ ಮೂಲಕ ದಸರಾ ಉತ್ಸವದ ಗೌರವ ಹೆಚ್ಚಿಸುವ ಕಾರ್ಯ ಆಗಬೇಕು ಎಂದಿದ್ದಾರೆ.

ಜತೆಗೆ ದಸರಾ ಮಹೋತ್ಸವದ ಉದ್ಘಾಟನೆಗೆ ನಾಡಿನ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡಿರುವ ಶೋಷಿತ, ಅಹಿಂದ ವರ್ಗದವರನ್ನು ಉತ್ಸವ ಸಮಿತಿ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.