ಮೈಸೂರು: ಉತ್ತಮ ಪ್ರದರ್ಶನ ನೀಡಿದ ಮೈಸೂರು ವಿಭಾಗವು ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಾಲಿಬಾಲ್ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬೃಂದಾವನ ಬಡಾವಣೆಯ ಕುವೆಂಪು ಬೃಂದಾವನ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯಾವಳಿಯಯ 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮೈಸೂರು ತಂಡವು 2-0 ನೇರ ಸೆಟ್‌ಗಳಿಂದ ಕಲಬುರಗಿ ವಿರುದ್ಧ ಜಯ ಸಾಧಿಸಿತು.
ಇದಕ್ಕೂ ಮುನ್ನ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಪಂದ್ಯಾವಳಿಗೆ ಚಾಲನೆ ನೀಡಿದರು. ಇದೇ ವೇಳೆ ದೈಹಿಕ ಶಿಕ್ಷಣದ ಶಿಕ್ಷಕರಾದ ಎಂ.ಜಿ.ವೇಣುಗೋಪಾಲ್, ಎಚ್.ವಿ.ಸೋಮಶೇಖರ್, ಅಕ್ಕಮ್ಮ ಹಾಗೂ ಕೆ.ಕೆ.ಶೋಭಾ ಕುಮಾರಿ ಅವರಿಗೆ ಸನ್ಮಾನಿಸಲಾಯಿತು.
ವಿಶ್ರಾಂತ ಕುಲಪತಿ ಶಶಿಧರ ಪ್ರಸಾದ್, ಉಪ ನಿರ್ದೇಶಕ ಪಾಂಡು, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಸಿದ್ದರಾಜು ,ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಪಿ. ಮಹದೇವಯ್ಯ, ಶಿಕ್ಷಕರಾದ ಸೋಮೇಗೌಡ, ಚೌಡಪ್ಪ, ನಾಗೇಶ್, ವೆಂಕಟೇಶ್ ಇದ್ದರು. ಪಂದ್ಯಾವಳಿಯಲ್ಲಿ ಮೈಸೂರು, ಬೆಂಗಳೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳಿಂದ 16 ತಂಡಗಳು ಭಾಗಿಯಾಗಿವೆ. 14 ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ವಿಭಾಗ, 17 ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಸೆ.23ರ ವರೆಗೆ ಸ್ಪರ್ಧೆ ನಡೆಯುತ್ತದೆ.