ಜಿಲ್ಲೆ

ರಾಜ್ಯಮಟ್ಟದ ಥ್ರೋಬಾಲ್: ಮೈಸೂರು ಜಿಲ್ಲಾ ತಂಡ ದ್ವಿತೀಯ

reportermys

ಮೈಸೂರು: ಜಿಲ್ಲಾ ಥ್ರೋಬಾಲ್ ಅಸೋಸಿಯೇಷನ್ ತಂಡವು ರಾಜ್ಯಮಟ್ಟದ ಮುಕ್ತ ಥ್ರೋಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

ಯಂಗ್‌ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬೆಂಗಳೂರಿನ ವಿಜಯನಗರದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಈ ಸಾಧನೆ ಮಾಡಿದೆ. ಆ ಮೂಲಕ 10 ಸಾವಿರ ರೂ. ಹಾಗೂ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿದೆ.