ಅವಿನಾಶ್ ಜೈನಹಳ್ಳಿ ಮೈಸೂರು
ರಾಜ್ಯ ಮಟ್ಟದ ‘ದಸರಾ ಕ್ರೀಡಾಕೂಟ ಸಿಎಂ ಕಪ್’ ಈಜು ಸ್ಪರ್ಧೆಯ ಅಂತಿಮ ದಿನವೂ ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದ ಸ್ಪರ್ಧಿಗಳು ಹೆಚ್ಚು ಪದಕಗಳನ್ನು ಬೇಟೆಯಾಡಿದ್ದಾರೆ.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣ ಆವರಣದ ಈಜು ಕೊಳದಲ್ಲಿ ಬುಧವಾರ ಮುಕ್ತಾಯಗೊಂಡ ಸ್ಪರ್ಧೆಯ ಪುರುಷರು ಹಾಗೂ ಮಹಿಳೆಯರ ಎರಡು ವಿಭಾಗದಿಂದ ಬಸವನಗುಡಿ ಈಜು ಕೇಂದ್ರದ ಸ್ಪರ್ಧಿಗಳು 30 ಚಿನ್ನ, 29 ಬೆಳ್ಳಿ, 18 ಕಂಚು ಸೇರಿದಂತೆ ಒಟ್ಟು 77 ಪದಕಗಳನ್ನು ಪಡೆದುಕೊಂಡರು. ಡಾಲ್ಫಿನ್ ಅಕ್ವೆಟಿಕ್ ಸ್ಪರ್ಧಿಗಳು 8 ಚಿನ್ನ ಸೇರಿದಂತೆ 15 ಪದಕ ಪಡೆದರು.
ನಾಲ್ಕು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಪಡೆದ ಬಸವನಗುಡಿ ಈಜು ಕೇಂದ್ರದ ಎಂ.ಪೃಥ್ವಿ ಪುರುಷರ ವಿಭಾಗದಲ್ಲಿ ಹಾಗೂ 5 ಚಿನ್ನದ ಪದಕ ಬೇಟೆಯಾಡಿದ ಬೆಂಗಳೂರಿನ ಡಾಲ್ಫಿನ್ ಅಕ್ವೆಟಿಕ್‌ನ ನೈಶಾ ಶೆಟ್ಟಿ ಮಹಿಳಾ ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು. ಮೈಸೂರು ಪ್ರತಿಭೆ ಎಸ್.ತಾನ್ಯಾ ವೈಯಕ್ತಿಕ ನಾಲ್ಕು ಪದಕ ಪಡೆದು ಮಿಂಚಿದರು.
800 ಮೀ. ಫ್ರೀಸ್ಟೈಲ್: 1.ಸಾಹಿಲ್ ದಲಾಲ್(ಬಸವನಗುಡಿ ಈಜು ಕೇಂದ್ರ, 9.19 ನಿ.), 2.ಎಚ್.ಎಂ.ಪ್ರಶಾನ್ಸ್(ಬಸವನಗುಡಿ), ಲಿತೀಶ್ ಜಿ.ಗೌಡ(ಬಸವನಗುಡಿ). 200 ಮೀ.ಬ್ರೆಸ್ಟ್ ಸ್ಟ್ರೋಕ್: 1.ಡೇನಿಯಲ್ ಪಾಲ್(ಬಸವನಗುಡಿ, 2.36 ನಿ.), 2.ಶ್ರೇಯಸ್ ಮಂಜುನಾಥ್(ಬಸವನಗುಡಿ), 3.ಸೂರ್ಯ ಜೋಯಪ್ಪ(ಬಸವನಗುಡಿ). 200 ಮೀ. ಬಟರ್ ಫ್ಲೈ: 1.ಮ್ಯಾಥಿವ್(ಬಸವನಗುಡಿ, 2.19 ನಿ.), 2.ಶ್ರೇಯಸ್ ವೆಂಕಟೇಶ್(ಬಸವನಗುಡಿ), 3.ಎಸ್.ಸಮರ್ಥ್(ಎಐಎಂಎಸ್). 50 ಮೀ.ಫ್ರೀಸ್ಟೈಲ್: 1.ಎಂ.ಪೃಥ್ವಿ (ಬಸವನಗುಡಿ, 25.41 ಸೆ.), 2.ಎಸ್.ವಿಶ್ವಥನ್(ಪಿಎಂಎಸ್ ), 3.ಡಿ.ಎಸ್.ಪೃಥ್ವಿಕ್(ಬಸವನಗುಡಿ). 400 ಮೀ.ಐಎಂ: 1.ಸಾಹಿಲ್ ದಲಾಲ್(ಬಸವನಗುಡಿ, 5.04 ನಿ.), 2.ಲಿತೀಶ್ ಜಿ.ಗೌಡ(ಬಸವನಗುಡಿ), 3.ಸೂರ್ಯ ಜೋಯಪ್ಪ(ಬಸವನಗುಡಿ). 200 ಮೀ. ಫ್ರೀಸ್ಟೈಲ್: 1.ಧ್ಯಾನ್ ಬಾಲಕೃಷ್ಣ (ಬಸವನಗುಡಿ, 2.01 ನಿ.), 2.ಧೋನೀಶ್ (ಬಸವನಗುಡಿ), 3.ಎಚ್.ಎಂ.ಪ್ರಶಾನ್ಸ್(ಬಸವನಗುಡಿ). 50 ಮೀ.ಬಟರ್ ಫ್ಲೈ: 1.ಎಂ.ಪೃಥ್ವಿ(ಬಸವನಗುಡಿ, 26.49 ಸೆ.), 2.ಎಸ್.ವಿಶ್ವಥನ್(ಪಿಎಂಎಸ್), 3.ಮ್ಯಾಥಿವ್(ಬಸವನಗುಡಿ). 50 ಮೀ.ಬ್ಯಾಕ್ ಸ್ಟ್ರೋಕ್: 1.ಧ್ಯಾನ್ ಬಾಲಕೃಷ್ಣ(ಬಸವನಗುಡಿ, 29.75 ಸೆ.), 2.ಎಂ.ಪೃಥ್ವಿ(ಬಸವನಗುಡಿ), 3.ಅಗಸ್ತ್ಯ ಮಂಜುನಾಥ್(ಏಕಲವ್ಯ).
800 ಮೀ. ಫ್ರೀಸ್ಟೈಲ್: 1.ಅದಿತಿ ಮುಲಯ್ (ಬಸವನಗುಡಿ, 9.51 ನಿ.), 2.ಬಿ.ಎಸ್.ಜನ್ಯಾ(ಬಸವನಗುಡಿ), 3.ಶಾಮನಿ ಎಚ್.ಗೌಡ(ಗ್ಲೋಬಲ್ ಮೈಸೂರು). 200 ಮೀ. ಬ್ರೆಸ್ಟ್ ಸ್ಟ್ರೋಕ್: 1.ಎಸ್.ತಾನ್ಯಾ (ಮೈಸೂರು, 2.46 ನಿ.), 2.ವಿಹಿತಾ ನಯನಾ(ಬಸವನಗುಡಿ), 3.ವಿ.ಹಿತೈಶಿ(ವಿಜಯನಗರ). 200 ಮೀ.ಬಟರ್ ಫ್ಲೈ: 1.ತನಿಷಾ ವಿನಯ್(ಬಸವನಗುಡಿ, 2.34 ನಿ.), 2.ಬಿ.ಎಸ್.ಜನ್ಯಾ(ಬಸವನಗುಡಿ), 3.ತಿತಿಕ್ಷಾ(ಬಸವನಗುಡಿ). 50 ಮೀ.ಫ್ರೀಸ್ಟೈಲ್: 1.ಲಕ್ಷ್ಮೀ ತ್ರಿವಿಕ್ರಂ ನಿಕ್ಕಂ(ಬಸವನಗುಡಿ, 29.59 ಸೆ.), 2.ರಿಷಿಕಾ(ಬಸವನಗುಡಿ), 3.ಕೆ.ಆರ್.ಶ್ರುತಿ(ಗ್ಲೋಬಲ್ ಮೈಸೂರು). 400 ಮೀ.ಐಎಂ: 1.ಅದಿತಿ (ಬಸವನಗುಡಿ, 5.25 ನಿ.), 2.ಎಸ್.ತಾನ್ಯಾ(ಮೈಸೂರು). 200 ಮೀ.ಫ್ರೀಸ್ಟೈಲ್: 1.ವಿಹಿತಾ ನಯನಾ(ಬಸವನಗುಡಿ, 2.12 ನಿ.), 2.ಅದಿತಿ(ಬಸವನಗುಡಿ), 3.ಇ.ಎಸ್.ಸಮನ್ವಿ(ಬಸವನಗುಡಿ). 50 ಮೀ.ಬಟರ್ ಫ್ಲೈ: 1.ನೈಶಾ ಶೆಟ್ಟಿ (ಡಾಲ್ಫಿನ್, 30.63 ಸೆ.), 2.ರಿಶಿಕಾ (ಬಸವನಗುಡಿ), 3.ವಿ.ಹಿತೈಶಿ(ವಿಜಯನಗರ). 50 ಮೀ. ಬ್ಯಾಕ್ ಸ್ಟ್ರೋಕ್: 1.ವಿಹಿತಾ ನಯನಾ(ಬಸವನಗುಡಿ, 32.53 ಸೆ.), 2.ಸಿದ್ಧಿ ಗೌತಮ್(ಡಾಲ್ಫಿನ್), 3.ಕೆ.ಆರ್.ಶ್ರುತಿ(ಗ್ಲೋಬಲ್ ಮೈಸೂರು).