ಜಿಲ್ಲೆ

ಮೈಸೂರು ದಸರಾ ಹಿನ್ನೆಲೆ : ಸಂಚಾರ ವ್ಯವಸ್ಥೆಯಲ್ಲಿ ಹಲವು ಮಾರ್ಪಾಡು

ಸದೇಶ್ ಕಾರ್ಮಾಡ್

ಮೈಸೂರು: ನಾಡಹಬ್ಬ ದಸರಾ ಪ್ರಯುಕ್ತ ಅ.15 ರಿಂದ 24ರವರೆಗೆ ಪ್ರತಿದಿನ ಸಂಜೆ 4 ರಿಂದ ರಾತ್ರಿ 11ರವರೆಗೆ ನಗರದಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶ ಹೊರಡಿಸಿದ್ದಾರೆ.

ದಸರಾ ಸಂದರ್ಭದಲ್ಲಿ ಟ್ರಾಫಿಕ್ ಸಮಸ್ಯೆ ಆಗದಂತೆ ತಡೆಯುವ ಉದ್ದೇಶದಿಂದ ಅರಮನೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೆ ಹಲವು ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ವಾಹನ ನಿಲುಗಡೆ ನಿಷೇಧಿತ ಪ್ರದೇಶಗಳು:
ಬಿ.ಎನ್.ರಸ್ತೆ, ಎ.ವಿ.ರಸ್ತೆ, ಸಯ್ಯಜಿರಾವ್ ರಸ್ತೆ, ಪುರಂದರ ರಸ್ತೆ, ರಮಾವಿಲಾಸ ರಸ್ತೆ, ಮುಡಾ ಜಂಕ್ಷನ್‌ನಿಂದ ಬನುಮಯ್ಯ ಕಾಲೇಜು ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ (ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ಗಳನ್ನು ಹೊರತುಪ ಡಿಸಿ) ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಸಯ್ಯಜಿರಾವ್ ರಸ್ತೆಯಲ್ಲಿ ಬಸವೇಶ್ವರ ವೃತ್ತದಿಂದ ಅಗ್ರಹಾರ ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ, ಎಂ.ಜಿ ರಸ್ತೆಯಲ್ಲಿ ಅಗ್ರಹಾರ ವೃತ್ತದಿಂದ ಸಿದ್ದಪ್ಪ ಚೌಕದವರೆಗೆ ರಸ್ತೆಯ ಎಡ ಬದಿಯಲಿ,್ಲ ಎಂ.ಜಿ ರಸ್ತೆಯಲ್ಲಿ ಅಗ್ರಹಾರ ವೃತ್ತದಿಂದ ಹಳೆಯ ಜೆಎಸ್‌ಎಸ್ ಆಸ್ಪತ್ರೆ ಜಂಕ್ಷನ್‌ವರೆಗೆ ರಸ್ತೆಯ ಎಡ ಬದಿಗಳಲ್ಲಿ, ಜೆಎಲ್‌ಬಿ ರಸ್ತೆಯಲ್ಲಿ ಶ್ರೀನಿವಾಸ ವೃತ್ತದಿಂದ ಎಲೆತೋಟ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ, ರಾಮಸ್ವಾಮಿ ವೃತ್ತದಿಂದ ಸರಸ್ವತಿಪುರಂ ಅಗ್ನಿಶಾಮಕ ಠಾಣೆ ಜಂಕ್ಷನ್‌ವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ, ಅಶೋಕ ರಸ್ತೆಯಲ್ಲಿ ಮಿಲಾದ್ ಪಾರ್ಕ್ ಜಂಕ್ಷನ್‌ನಿಂದ ಹರ್ಷ ರಸ್ತೆ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಹಾಗೂ ಗಾಂಧಿ ಚೌಕದ ಸುತ್ತಲಿನಲ್ಲಿ ರಸ್ತೆ ಬದಿಯಲ್ಲಿ (ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹೊರತುಪಡಿಸಿ) ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಓಲ್ಡ್ ಬ್ಯಾಂಕ್ ರಸ್ತೆಯಲ್ಲಿ ಗಾಂಧಿ ಚೌಕದಿಂದ ಸಯ್ಯಜಿರಾವ್ ರಸ್ತೆ ಜಂಕ್ಷನ್‌ವರೆಗೆ ರಸ್ತೆ, ಚಂದ್ರಗುಪ್ತ ರಸ್ತೆಯಲ್ಲಿ ಅಶೋಕ ರಸ್ತೆ ಜಂಕ್ಷನ್‌ನಿಂದ ಬಿ.ಎನ್ ರಸ್ತೆ ಜಂಕ್ಷನ್‌ವರೆಗೆ, ನೆಹರು ವೃತ್ತದಿಂದ ನೇಮಿನಾಥ ಸ್ಟೀಲ್ ಜಂಕ್ಷನ್‌ವರೆಗೆ (ಮಿನಿ ವಿಧಾನಸೌಧ ರಸ್ತೆ ), ಬಿ.ಎನ್. ರಸ್ತೆಯಲ್ಲಿ ಹೈದರಾಲಿ ಖಾನ್ ವೃತ್ತ (ಫೈವ್‌ಲೈಟ್ ಸರ್ಕಲ್)ದಿಂದ ಸೆಂಟ್ರಲ್ ಮಾಲ್ (ಛತ್ರಿ ಮರ) ಜಂಕ್ಷನ್‌ವರೆಗೆ ರಸ್ತೆ, ಜೆ.ಕೆ.ಗ್ರೌಂಡ್ ಜಂಕ್ಷನ್‌ನಿಂದ ಟಿ.ಎನ್.ನರಸಿಂಹಮೂರ್ತಿ ವೃತ್ತದವರೆಗೆ (ಎಲ್.ಐ.ಸಿ ವೃತ್ತ) ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಡಾ.ರಾಜ್‌ಕುಮಾರ್ ವೃತ್ತ (ಫೌಂಟನ್ ವೃತ್ತ)ದಿಂದ ಹಳೆ ಮೈಸೂರು-ಬೆಂಗಳೂರು ರಸ್ತೆ, ನಾಡಪ್ರಭು ಕೆಂಪೇಗೌಡ ವೃತ್ತದವರೆಗೆ ರಸ್ತೆ, ಟಿ.ಎನ್.ನರಸಿಂಹಮೂರ್ತಿ ವೃತ್ತದಿಂದ (ಎಲ್‌ಐಸಿ ವೃತ್ತ) ಹೊಸ ಮೈಸೂರು ಬೆಂಗಳೂರು ರಸ್ತೆಯ ಓಲ್ಡ್ ಟೋಲ್‌ಗೇಟ್ ಜಂಕ್ಷನ್‌ವರೆಗೆ, ಸರ್ಕಾರಿ ಭವನದ ರಸ್ತೆ, ಸರ್ಕಾರಿ ಭವನದ ದಕ್ಷಿಣ ದ್ವಾರದ ಜಂಕ್ಷನ್‌ನಿಂದ ದಕ್ಷಿಣಕ್ಕೆ ಜಯಚಾಮರಾಜೇಂದ್ರ ಒಡೆಯರ್ ವೃತ್ತದವರೆಗೆ (ಹಾಡಿರ್ಂಜ್ ವೃತ್ತ),ಲೋಕರಂಜನ್ ರಸ್ತೆಯಲ್ಲಿ ಸರ್ಕಸ್ ಗ್ರೌಂಡ್ ಜಂಕ್ಷನ್‌ನಿಂದ ಜಯಚಾಮರಾಜೇಂದ್ರ ಒಡೆಯರ್ ವೃತ್ತದವರೆಗೆ (ಹಾಡಿರ್ಂಜ್ ವೃತ್ತ), ಹರಿಕೃಷ್ಣ ವೃತ್ತದಿಂದ (ಡಿ.ಪಿ.ಓ) ಹಳೆ ಬಿ.ಜೆ.ಪಿ.ಕಛೇರಿ ಜಂಕ್ಷನ್‌ವರೆಗೆ, ವಸ್ತು ಪ್ರದರ್ಶನ ಮೈದಾನದ ಮೇನ್ ಗೇಟ್ ಜಂಕ್ಷನ್‌ನಿಂದ ಮೃಗಾಲಯ ರಸ್ತೆ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಇಟ್ಟಿಗೆಗೂಡಿನ 5ನೇ ಕ್ರಾಸ್ ರಸ್ತೆಯಲ್ಲಿ ಮೃಗಾಲಯದ ರಸ್ತೆ ಜಂಕ್ಷನ್‌ನಿಂದ ವಸ್ತು ಪ್ರದರ್ಶನ ಮೈದಾನದ ಪೂರ್ವ ದ್ವಾರದವರೆಗೆ, ಮಾನಸ ರಸ್ತೆಯಲ್ಲಿ ಎಂ.ಜಿ.ರಸ್ತೆ ಜಂಕ್ಷನ್‌ನಿಂದ (ಮಾಲ್ ಆಫ್ ಮೈಸೂರು) ಲೋಕರಂಜನ್ ರಸ್ತೆ ಜಂಕ್ಷನ್‌ವರೆಗೆ, ಮಲೈಮಹದೇಶ್ವರ ರಸ್ತೆಯಲ್ಲಿ ಬಿ.ಎನ್.ರಸ್ತೆ ಜಂಕ್ಷನ್‌ನಿಂದ (ಛತ್ರಿ ಮರ) ಪೂರ್ವಕ್ಕೆ ಚನ್ನಯ್ಯ ವೃತ್ತದವರೆಗೆ, ಕಾಳಿಕಾಂಭ ದೇವಸ್ಥಾನ ಜಂಕ್ಷನ್‌ನಿಂದ ಸಮೋಸಾ ಕಾರ್ನರ್‌ವರೆಗೆ, ಮಹದೇವಪುರ ರಸ್ತೆಯಲ್ಲಿ ಸಮೋಸಾ ಕಾರ್ನರ್ ಜಂಕ್ಷನ್‌ನಿಂದ ಉದಯಗಿರಿ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಸಂಚಾರ ನಿಬರ್ಂಧಿತ ರಸ್ತೆಗಳು:
ಅ.24 ರಂದು ಬೆಳಗ್ಗೆ 06 ರಿಂದ ರಾತ್ರಿ 08ರವರೆಗೆ ದಸರಾ ಜಂಬೂ ಸವಾರಿ ಮೆರವಣಿಗೆಯು ಸಾಗುವ ಮಾರ್ಗವಾದ ಅರಮನೆಯ ಬಲರಾಮ ದ್ವಾರ, ಆಲ್ಬರ್ಟ್ ವಿಕ್ಟರ್ ರಸ್ತೆ, ಕೆ.ಆರ್.ವೃತ್ತ, ಸಯ್ಯಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಹೈವೇ ವೃತ್ತ, ನೆಲ್ಸನ್ ಮಂಡೇಲ ರಸ್ತೆ, ಬನ್ನಿಮಂಟಪದ ಮುಖ್ಯ ದ್ವಾರದವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರ ನಿಬರ್ಂಧಿಸಲಾಗಿದೆ. ಅಲ್ಲದೆ, ಬನ್ನಿ ಮಂಟಪ ಕವಾಯಿತು ಮೈದಾನದ ಉತ್ತರ ಭಾಗದ ರಸ್ತೆಯಲ್ಲಿ ಹನುಮಂತನಗರ 3ನೇ ಮುಖ್ಯ ರಸ್ತೆ ಜಂಕ್ಷನ್‌ನಿಂದ ಬೆಂಗಳೂರು ರಸ್ತೆ ಓಲ್ಡ್ ಟೋಲ್ ಗೇಟ್ ಜಂಕ್ಷನ್‌ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿಬರ್ಂಧಿಸಲಾಗಿದೆ.

ನಂಜನಗೂಡು ರಸ್ತೆ, ತಿ.ನರಸೀಪುರ ರಸ್ತೆ, ಬನ್ನೂರು ರಸ್ತೆ, ಬೆಂಗಳೂರು ರಸ್ತೆ, ಕೆ.ಆರ್.ಎಸ್ ರಸ್ತೆ, ಹುಣಸೂರು ರಸ್ತೆ, ಬೋಗಾದಿ ರಸ್ತೆ ಮತ್ತು ಎಚ್.ಡಿ.ಕೋಟೆ ರಸ್ತೆ ಮೂಲಕ ಮೈಸೂರು ನಗರಕ್ಕೆ ಆಗಮಿಸುವ ಭಾರಿ ಮತ್ತು ಲಘು ಸರಕು ಸಾಗಾಣಿಕೆ ವಾಹನಗಳು ನಗರಕ್ಕೆ ಪ್ರವೇಶಿಸದಂತೆ ನಿಬರ್ಂಧಿಸಲಾಗಿದೆ.

ಖಾಸಗಿ ಬಸ್‌ಗಳ ಸಂಚಾರ ನಿಬರ್ಂಧ:
ಅ.15 ರಿಂದ 24 ರವರೆಗೆ ಪ್ರತಿ ದಿನ ಸಂಜೆ 04 ರಿಂದ ರಾತ್ರಿ 11ರವರೆಗೆ ಖಾಸಗಿ ಬಸ್‌ಗಳ ಸಂಚಾರಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ತಿ.ನರಸೀಪುರ ಕಡೆಗಳಿಂದ ಮೈಸೂರು ನಗರಕ್ಕೆ ಆಗಮಿಸುವ ಖಾಸಗಿ ಬಸ್‌ಗಳು: (ಆಗಮನ) ತಿ.ನರಸೀಪುರ-ತಿ. ಜಂಕ್ಷನ್- ಆರ್.ಮಹದೇವಪ್ಪ ವೃತ್ತ - ರಾಜಕುಮಾರ್ ರಸ್ತೆ ಉದಯಗಿರಿ ಕೆ.ಇ.ಬಿ ಜಂಕ್ಷನ್ ಬಲ ತಿರುವು - ಮಹದೇವಪುರ ರಸ್ತೆ - ಮಹದೇವಪುರ ರಿಂಗ್ ರಸ್ತೆ ಜಂಕ್ಷನ್-ಎಡ ತಿರುವು -ರಿಂಗ್ ರಸ್ತೆ -ಪುಷ್ಪಾಶ್ರಮ ಜಂಕ್ಷನ್ - ನಾಡಪ್ರಭು ಕೆಂಪೇಗೌಡ ವೃತ್ತ ಎಡ - ತಿರುವು - ಹೊಸ ಬೆಂಗಳೂರು ಮೈಸೂರು ರಸ್ತೆ, ದಂಡಿನ ಮಾರಮ್ಮ ದೇವಸ್ಥಾನ ಜಂಕ್ಷನ್- ಲಿಂಕ್ ರಸ್ತೆ ಜಂಕ್ಷನ್-ಬಲ ತಿರುವು ಟಿ.ಎನ್.ನರಸಿಂಹಮೂರ್ತಿ ವೃತ್ತ (ಎಲ್.ಐ.ಸಿ ವೃತ್ತ)- ನೆಲ್ಸನ್ ಮಂಡೇಲ ರಸ್ತೆ- ಅಬ್ದುಲ್ ಕಲಾಂ ಆಜಾದ್ ವೃತ್ತ (ಹೈವೇ ವೃತ್ತ)- ಸುಭಾಷ್‌ಚಂದ್ರ ಬೋಸ್ ವೃತ್ತ (ಆರ್.ಎಂ.ಸಿ ವೃತ್ತ) ಮೂಲಕ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳಬೇಕು.

ನಿರ್ಗಮನ: ಖಾಸಗಿ ಬಸ್ ನಿಲ್ದಾಣ- ಸುಭಾಷ್‌ಚಂದ್ರ ಬೋಸ್ ವೃತ್ತ (ಆರ್.ಎಂ.ಸಿ ವೃತ್ತ)- ಅಬ್ದುಲ್ ಕಲಾಂ ಆಜಾದ್ ವೃತ್ತ (ಹೈವೇ ವೃತ್ತ) - ನೆಲ್ಸನ್ ಮಂಡೇಲಾ ರಸ್ತೆ - ಟಿ.ಎನ್.ನರಸಿಂಹಮೂರ್ತಿ ವೃತ್ತ (ಎಲ್.ಐ.ಸಿ ವೃತ್ತ)- ಎಡ ತಿರುವು - ಬೆಂಗಳೂರು ಮೈಸೂರು ರಸ್ತೆ - ಜೆ.ಎಸ್.ಎಸ್ ಡೆಂಟಲ್ ಕಾಲೇಜು ಜಂಕ್ಷನ್ - ನಂದಿ ಬಸಪ್ಪ ಗೋರಿ ಜಂಕ್ಷನ್ - ಟೋಲ್ ಗೇಟ್ ಜಂಕ್ಷನ್ ಎಡ ತಿರುವು - ನಾಡಪ್ರಭು ಕೆಂಪೇಗೌಡ ವೃತ್ತ ಬಲ ತಿರುವು - ರಿಂಗ್ ರಸ್ತೆ - ಪುಷ್ಪಾಶ್ರಮ ಜಂಕ್ಷನ್ - ಮಹದೇವಪುರ ರಿಂಗ್ ರಸ್ತೆ ಜಂಕ್ಷನ್ ಬಲ ತಿರುವು - ಮಹದೇವಪುರ ರಸ್ತೆ - ಉದಯಗಿರಿ ಕೆ.ಇ.ಬಿ ಜಂಕ್ಷನ್ - ಎಡ ತಿರುವು ರಾಜಕುಮಾರ್ ರಸ್ತೆ - ಆರ್.ಮಹದೇವಪ್ಪ ವೃತ್ತ- ಟಿ.ನರಸೀಪುರ-ಬಿ ಜಂಕ್ಷನ್ ಮೂಲಕ ಮುಂದೆ ಸಾಗಬೇಕು.

ಬನ್ನೂರು ಕಡೆಗಳಿಂದ ಮೈಸೂರು ನಗರಕ್ಕೆ ಆಗಮಿಸುವ ಖಾಸಗಿ ಬಸ್‌ಗಳು : (ಆಗಮನ) ದೇವೇಗೌಡ ವೃತ್ತ- ಮಹದೇವಪುರ ರಿಂಗ್ ರಸ್ತೆ ಜಂಕ್ಷನ್ - ಪುಷ್ಪಾಶ್ರಮ ಜಂಕ್ಷನ್ - ನಾಡಪ್ರಭು ಕೆಂಪೇಗೌಡ ವೃತ್ತ - ಎಡ ತಿರುವು - ಬೆಂಗಳೂರು ಮೈಸೂರು ರಸ್ತೆ - ದಂಡಿನ ಮಾರಮ್ಮ ದೇವಸ್ಥಾನ ಜಂಕ್ಷನ್ ಲಿಂಕ್ ರಸ್ತೆ ಜಂಕ್ಷನ್ ಬಲ ತಿರುವು - ಟಿ.ಎನ್.ನರಸಿಂಹಮೂರ್ತಿ ವೃತ್ತ (ಎಲ್.ಐ.ಸಿ ವೃತ್ತ)- ನೆಲ್ಸನ್ ಮಂಡೇಲಾ ರಸ್ತೆ- ಅಬ್ದುಲ್ ಕಲಾಂ ಆಜಾದ್ ವೃತ್ತ (ಹೈವೇ ವೃತ್ತ)- ಸುಭಾಷ್‌ಚಂದ್ರ ಬೋಸ್ ವೃತ್ತ (ಆರ್.ಎಂ.ಸಿ ವೃತ್ತ)- ಖಾಸಗಿ ಬಸ್ ನಿಲ್ದಾಣಕ್ಕೆ ಆಗಮಿಸಬೇಕು.

ನಿರ್ಗಮನ: ಖಾಸಗಿ ಬಸ್ ನಿಲ್ದಾಣ - ಸುಭಾಷ್‌ಚಂದ್ರ ಬೋಸ್ ವೃತ್ತ (ಆರ್.ಎಂ.ಸಿ ವೃತ್ತ)- ಅಬ್ದುಲ್ ಕಲಾಂ ಆಜಾದ್ ವೃತ್ತ (ಹೈವೇ ವೃತ್ತ) ನೆಲ್ಸನ್ ಮಂಡೇಲಾ ರಸ್ತೆ ಟಿ.ಎನ್.ನರಸಿಂಹಮೂರ್ತಿ ವೃತ್ತ-(ಎಲ್.ಐ.ಸಿ ವೃತ್ತ)- ಎಡ ತಿರುವು- ಬೆಂಗಳೂರು ಮೈಸೂರು ರಸ್ತೆ - ಜೆ.ಎಸ್.ಎಸ್ ಡೆಂಟಲ್ ಕಾಲೇಜು ಜಂಕ್ಷನ್-ನಂದಿ ಬಸಪ್ಪ ಗೋರಿ ಜಂಕ್ಷನ್ - ಟೋಲ್ ಗೇಟ್ ಎಡ ತಿರುವು -ನಾಡಪ್ರಭು ಕೆಂಪೇಗೌಡ ವೃತ್ತ - ಬಲ ತಿರುವು- ಜಂಕ್ಷನ್ ರಿಂಗ್ ರಸ್ತೆ - ಪುಷ್ಪಾಶ್ರಮ ಜಂಕ್ಷನ್ - ಮಹದೇವಪುರ ರಿಂಗ್ ರಸ್ತೆ ಜಂಕ್ಷನ್ - ದೇವೇಗೌಡ ವೃತ್ತ ಎಡ ತಿರುವು - ಬನ್ನೂರು ರಸ್ತೆ ಮೂಲಕ ಮುಂದೆ ಸಾಗಬೇಕು.

ಕೆ.ಆರ್.ಎಸ್.ನಿಂದ ನಗರಕ್ಕೆ ಆಗಮಿಸುವ ಖಾಸಗಿ ಬಸ್‌ಗಳು: ಕೆ.ಆರ್.ಎಸ್.ರಸ್ತೆ - ವಿ.ವಿ.ಪುರಂ ವೃತ್ತ - ಆಕಾಶವಾಣಿ ವೃತ್ತ - ದಾಸಪ್ಪ ವೃತ್ತ ಮೂಲಕ ಧನ್ವಂತ್ರಿ ರಸ್ತೆ ಪ್ರವೇಶಿಸಿ ಗಾಯತ್ರಿ ಭವನ್ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಂಡು ಎಡ ತಿರುವು ಪಡೆದು ಜೆ.ಕೆ ಗ್ರೌಂಡ್ ಜಂಕ್ಷನ್‌ನಲ್ಲಿ ಎಡ ತಿರುವು - ಬಾಬು ಜಗಜೀವನರಾಂ ವೃತ್ತ ದಾಸಪ್ಪ ವೃತ್ತದಲ್ಲಿ ಬಲ ತಿರುವು ಪಡೆದು ಕೆ.ಆರ್.ಎಸ್. ರಸ್ತೆ ಮೂಲಕ ಮುಂದೆ ಸಾಗಬೇಕು.

ಅ.23 ರಿಂದ 24 ರವರೆಗೆ: ತಿ.ನರಸೀಪುರ ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಖಾಸಗಿ ಬಸ್‌ಗಳು ಟಿ.ನರಸೀಪುರ ರಸ್ತೆ ತಿ.ನರಸೀಪುರ-ಟಿ ಜಂಕ್ಷನ್ ಮೂಲಕ ಲಲಿತಮಹಲ್ ರಸ್ತೆ ಪ್ರವೇಶಿಸಿ ಹೋಟೆಲ್ ಲಲಿತಮಹಲ್‌ಗೆ ಹೊಂದಿಕೊಂಡಿರುವ ಲಲಿತಮಹಲ್ ಆಟದ ಮೈದಾನದಲ್ಲಿ ಬಸ್ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ / ಹತ್ತಿಸಿಕೊಂಡು ತಿ.ನರಸೀಪುರ ಟಿ-ಜಂಕ್ಷನ್ ಮೂಲಕ ಮುಂದೆ ಸಾಗಬೇಕು. (ನಗರದ ಕಡೆಗೆ ಪ್ರವೇಶಿಸುವಂತಿಲ್ಲ.)

ಬನ್ನೂರು ಕಡೆಗಳಿಂದ ಮೈಸೂರು ನಗರಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಖಾಸಗಿ ಬಸ್‌ಗಳು : ದೇವೇಗೌಡ ವೃತ್ತ- ಆರ್.ಮಹದೇವಪ್ಪ ವೃತ್ತ- ಟಿ ನರಸೀಪುರ-ಟಿ ಜಂಕ್ಷನ್ ಮೂಲಕ ಲಲಿತಮಹಲ್ ರಸ್ತೆ ಪ್ರವೇಶಿಸಿ ಹೋಟೆಲ್ ಲಲಿತಮಹಲ್‌ಗೆ ಹೊಂದಿಕೊಂಡಿರುವ ಲಲಿತಮಹಲ್ ಆಟದ ಮೈದಾನದಲ್ಲಿ ಬಸ್ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಂಡು ತಿ..ನರಸೀಪುರ ಟಿಜಂಕ್ಷನ್- ಆರ್.ಮಹದೇವಪ್ಪ ವೃತ್ತ- ಬನ್ನೂರು ರಸ್ತೆ ಮೂಲಕ ಮುಂದೆ ಸಾಗಬೇಕು. (ನಗರದ ಕಡೆಗೆ ಪ್ರವೇಶಿಸುವಂತಿಲ್ಲ.)

ಕೆ.ಆರ್.ಎಸ್.ನಿಂದ ನಗರಕ್ಕೆ ಬರುವ ಮತ್ತು ಹೋಗುವ ಖಾಸಗಿ ಬಸ್‌ಗಳು: ದಾಸಪ್ಪ ವೃತ್ತದ ಬಸ್ ನಿಲ್ದಾಣದ ಬಳಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಂಡು ಮೆಟ್ರೋಪೋಲ್ ವೃತ್ತದ ಬಳಿ ಬಲ ತಿರುವು ಪಡೆದು ಹುಣಸೂರು ರಸ್ತೆ ಮೂಲಕ ಮುಂದೆ ಸಾಗಬೇಕು.