Dasara 2013: Weights of the elephants in kgs were - Arjuna, Gajendra, Balarama, Abhimanyu, Varalakshmi and Sarala 
ಜಿಲ್ಲೆ

ಮರದ ಅಂಬಾರಿ ತಾಲೀಮಿಗೆ ಸಜ್ಜಾದ ಗಜಪಡೆ

ಸದೇಶ್ ಕಾರ್ಮಾಡ್

ಮೈಸೂರು: ನಾಡಹಬ್ಬ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಗೊಳಿಸಲು ತಾಲೀಮು ನಡೆಸುತ್ತಿರುವ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆ ಬುಧವಾರದಿಂದ ಮರದ ಅಂಬಾರಿಯ ತಾಲೀಮು ಪ್ರಾರಂಭಿಸಲಿದೆ.

ವೀರನಹೊಸಳ್ಳಿಯಿಂದ ಆ.21 ರಂದು ನಗರಕ್ಕೆ ಆಗಮಿಸಿ ಅರಣ್ಯ ಭವನದಲ್ಲಿ ಬೀಡುಬಿಟ್ಟು ನಂತರ ಆ.23 ರಂದು ಅರಮನೆ ಆವರಣ ಪ್ರವೇಶಿಸಿದ ಗಜಪಡೆ ಆ.24 ರಂದು ತೂಕದ ಪರೀಕ್ಷೆ ನಡೆಸಿ ನಂತರ ಆ.24 ರಿಂದ ಕಾಲ್ನಡಿಗೆಯ ತಾಲೀಮು ಪ್ರಾರಂಭಿಸಿತು. ಸೆ.1 ರಿಂದ ಇಲ್ಲಿಯವರೆಗೆ ಭಾರ ಹೊರುವ ತಾಲೀಮನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಗಜಪಡೆ ಬುಧವಾರದಿಂದ ಅಂಬಾರಿ ಹೊರುವ ತಾಲೀಮಿಗೆ ಅಣೆಯಾಗಿದೆ.

ಅರಮನೆ ಆವರಣದಲ್ಲಿ ಬುಧವಾರ ಸಂಜೆ 4ಕ್ಕೆ ಪೂಜೆ ಸಲ್ಲಿಸಿದ ನಂತರ ಅಂಬಾರಿ ಆನೆ ಅಭಿಮನ್ಯುವಿಗೆ ಮರದ ಅಂಬಾರಿ ಹೊರಿಸಲಾಗುವುದು. ನಂತರದ ದಿನಗಳಲ್ಲಿ ಉಳಿದ ಆನೆಗಳು ಮರದ ಅಂಬಾರಿ ಹೊರುವ ತಾಲೀಮು ನಡೆಸಲಿದೆ. ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಯಲಿದೆ.