ಜಿಲ್ಲೆ

ಮೈಸೂರು ವಕೀಲರ ಸಂಘ ಚುನಾವಣೆ: ಅಧ್ಯಕ್ಷರಾಗಿ ಎಸ್.ಲೋಕೇಶ್ ಆಯ್ಕೆ

ಮೈಸೂರು: ಮೈಸೂರು ವಕೀಲರ ಸಂದ ನೂತನ ಅಧ್ಯಕ್ಷರಾಗಿ ಎಸ್.ಲೋಕೇಶ್ ಆಯ್ಕೆಯಾಗಿದ್ದಾರೆ.


ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಭಾನುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ 1,021 ಮತಗಳೊಂದಿಗೆ ಲೋಕೇಶ್ ಗೆಲುವು ಸಾಧಿಸಿದರು.


ಉಪಾಧ್ಯಕ್ಷರಾಗಿ ಎಂ.ವಿ.ಚಂದ್ರಶೇಖರ್(893 ಮತ), ಕಾರ್ಯದರ್ಶಿಯಾಗಿ ಎ.ಜಿ.ಸುಧೀರ್(1,830), ಖಜಾಂಚಿಯಾಗಿ ಎಚ್.ಬಿ.ಭರತ್(904), ಜಂಟಿ ಕಾರ್ಯದರ್ಶಿಯಾಗಿ ಕೆ.ಆರ್.ಚರಣ್‌ರಾಜ್(1,103), ಮಹಿಳಾ ಜಂಟಿ ಕಾರ್ಯದರ್ಶಿಯಾಗಿ ಬಿ.ವಿ.ವಿನೋದ (1,118) ಆಯ್ಕೆಯಾಗಿದ್ದಾರೆ.


ಆಡಳಿತ ಮಂಡಳಿ ಹಿರಿಯ ಸದಸ್ಯರಾಗಿ ಜಿ.ಎಸ್.ಶಿವಸ್ವಾಮಿ(1,632), ಆರ್.ಕನ್ಯಾಕುವಾರಿ(1,436), ಕೆ.ಎಸ್.ಅಂದಾನಿ(1,197), ಕಷ್ಣ ಎಸ್.ಕಟಾವ್‌ಕರ್(1,159) ಹಾಗೂ ಎ.ಬಿ.ಪ್ರದೀಪ್‌ಕುವಾರ್(ಬಿಡ್ಡನ್1,140), ಕಿರಿಯ ಸದಸ್ಯರಾಗಿ ಕೆ.ದೇವರಾಜ(1,297),

ಎಂ.ಉಮೇಶ್(1,223), ಎಂ.ಕಿಶೋರ್ ಕೀರ್ತಿ(1,207), ಜೆ.ಲೋಕೇಶ್(1,175) ಹಾಗೂ ಎಂ.ಬಿ.ದೀಪು(1,023) ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಬಿ.ರಾಜು ತಿಳಿಸಿದ್ದಾರೆ. 45 ವಕೀಲರು ಚುನಾವಣಾ ಕಣದಲ್ಲಿದ್ದರು.


ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಿತು. ನಂತರ ಮತ ಎಣಿಕೆ ವಾಡಲಾಯಿತು. ಪೂರ್ಣ ಫಲಿತಾಂಶವು ರಾತ್ರಿ 10 ಗಂಟೆ ಹೊತ್ತಿಗೆ ಹೊರಬಿದ್ದಿತು. ಪ್ರಸಕ್ತ ಆಡಳಿತ ಮಂಡಳಿಯ ಅಧಿಕಾರಾವಧಿ 202426ರ ವರೆಗೆ ಇರಲಿದೆ.