ಜಿಲ್ಲೆ

ದೇಶೀಯ ಚಿತ್ರ ಪರಂಪರೆ ಚಿತ್ರಸಂತೆ ಪ್ರಾರಂಭವಾಗಲಿ: ಪ್ರೊ. ಮುರಳೀಧರ ಉಪಾಧ್ಯ

ಗೋಪಾಲಕೃಷ್ಣ ಪಾದೂರ್

ಉಡುಪಿ: ಮೈಸೂರು ಹಾಗೂ ಗಂಜೀಫಾ ಚಿತ್ರಶೈಲಿ ಭಾರತೀಯ ಕಲಾ ಪ್ರಕಾರಗಳೆಲ್ಲ ಬಹಳ ವಿಶಿಷ್ಟತೆಯಿಂದ ಕೂಡಿದೆ. ಎಲ್ಲ ದೇಶೀಯ ಚಿತ್ರ ಪರಂಪರೆಗಳ ಚಿತ್ರಸಂತೆಯೊಂದನ್ನು ಉಡುಪಿಯಲ್ಲಿ ಆಯೋಜಿಸಿದರೆ ಕಲೆ, ಕಲಾವಿದರಿಗೆ ಉತ್ತಮ ಪ್ರೋತ್ಸಾಹ ದೊರಕಬಹುದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ  ಅಭಿಪ್ರಾಯಪಟ್ಟರು.

ಶನಿವಾರ ಭಾವನಾ ಪೌಂಡೇಶನ್ ಹಾವಂಜೆ, ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಹಿರಿಯಡ್ಕದ ಸಂಸತಿ ಸಿರಿ ಟ್ರಸ್ಟ್ ಹಾಗೂ ಆಭರಣ್ ಜುವೆಲ್ಲರ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಜನಪದ ಸರಣಿ ಕಲಾ ಕಾರ್ಯಾಗಾರದಲ್ಲಿ ಮೈಸೂರು ಚಿತ್ರಗಳ ಕಲಾಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿ ಈಶಾವಾಸ್ಯ ಪ್ರತಿಷ್ಠಾನದ ವಿಶ್ವಸ್ಥ ವಿನಯ್ ಬನ್ನಂಜೆ, ಮೈಸೂರು ಹಾಗೂ ಗಂಜೀಫಾ ಕಲೆ ಆಧ್ಯಾತ್ಮಕ್ಕೆ ಬಹು ಹತ್ತಿರವಾಗಿದೆ ಎಂಬುದು ಬನ್ನಂಜೆ ಗೋವಿಂದಾಚಾರ್ಯರ ಅಭಿಪ್ರಾಯವಾಗಿತ್ತು ಎಂದರು. ಭಾವನಾ ಪ್ರತಿಷ್ಠಾನದ ನಿರ್ದೇಶಕ ಹಾವಂಜೆ ಮಂಜುನಾಥ ರಾವ್ ಹಾಗೂ ಮಂಗಳೂರಿನ ಆರ್ಕಿಟೆಕ್ಟ್ ಪ್ರಮುಖ್ ರೈ ಉಪಸ್ಥಿತರಿದ್ದರು.