ತಾವರಗೇರಾ ಸಮೀಪದ ಮ್ಯಾದರಡೊಕ್ಕಿ ಹೊರವಲಯದ ಜಮೀನಿನಲ್ಲಿ ವಶಪಡಿಸಿಕೊಂಡ ಗಾಂಜಾ ಗಿಡಗಳು ಮತ್ತು ಆರೋಪಿ ಹನಮಂತ ಜತೆ ಪೊಲೀಸ್ ಸಿಬ್ಬಂದಿ ಇದ್ದಾರೆ. 
ಜಿಲ್ಲೆ

ದಾಳಿ ನಡೆಸಿ ಗಾಂಜಾ ಗಿಡಗಳ ವಶಪಡಿಸಿಕೊಂಡ ಪೊಲೀಸರು

ತಾವರಗೇರಾ: ಮ್ಯಾದರಡೊಕ್ಕಿ ಹೊರವಲಯದ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಬುಧವಾರ ರಾತ್ರಿ ಪಿಎಸ್‌ಐ ಗೀತಾಂಜಲಿ ಶಿಂಧೆ ಮತ್ತು ಸಿಬ್ಬಂದಿ ದಾಳಿ ನಡೆಸಿ ವಶಪಡಿಸಿಕೊಂಡಿದೆ.

ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ತಂಡಕ್ಕೆ ಇತ್ತು. ಸಕಲ ಸಿದ್ಧತೆ ಮಾಡಿಕೊಂಡ ಪಿಎಸ್‌ಐ ಗೀತಾಂಜಲಿ ಶಿಂಧೆ ನೇತೃತ್ವದ ತಂಡ ದಾಳಿ ನಡೆಸಿತು. ಹನುಮಂತ ಯರದೊಡ್ಡಿ ಎಂಬುವರ ಜಮೀನಿನಲ್ಲಿ ಬೆಳೆದಿದ್ದ 3,500 ರೂ. ಮೌಲ್ಯದ ಗಾಂಜಾ ಗಿಡಗಳು ಮತ್ತು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ದಾಳಿಯಲ್ಲಿ ಸಿಬ್ಬಂದಿ ಬಸವರಾಜ, ಮಂಜುನಾಥ, ಹನುಮಗೌಡ, ಆನಂದ, ಶರಣಪ್ಪ ಪಾಲ್ಗೊಂಡಿದ್ದರು.