ಜಿಲ್ಲೆ

ನನ್ನ ಆರಾಧ್ಯ ದೇವರು ನಾಯಕನಹಟ್ಟಿ ತಿಪ್ಪೇಸ್ವಾಮಿ

Davangere - Desk - Mahesh Babu E

ನಾಯಕನಹಟ್ಟಿ: ನಾನು ಸತ್ಯ, ಧರ್ಮ, ದೇವರನ್ನು ನಂಬಿದವನು. ಅನಗತ್ಯವಾಗಿ ನನ್ನ ರಾಜಕೀಯ ಓಟ ಸಹಿಸಿದವರು ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ ಎಂದು ಸಚಿವ ಡಿ.ಸುಧಾಕರ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇವರ ಮೇಲೆ ನಂಬಿಕೆ ನನಗೆ ಸದಾ ಇದೆ. ಅದಕ್ಕಾಗಿ ನಾನು ಆರಾಧಿಸುವ ಶ್ರೀಗುರು ತಿಪ್ಪೇರುದ್ರಸ್ವಾಮಿ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿದ್ದೇನೆ. ತನಿಖೆ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದರು.