ಜಿಲ್ಲೆ

ಸಾಂಸ್ಕೃತಿಕ ನಗರಿಗೂ ಬಂತು ಮೈ ಫ್ರೊಯೋಲ್ಯಾಂಡ್ ಐಸ್‌ಕ್ರೀಮ್

ಮೈಸೂರಿನ ಮಾರುಕಟ್ಟೆ ಇದೀಗ ಬಾಯಿ ಚಪ್ಪರಿಸುವ ರುಚಿಕರ ಸ್ವಾದಕ್ಕೆ ಮತ್ತೊಂದು ವೇದಿಕೆ ಕಲ್ಪಿಸಿದೆ. ಸಾಂಪ್ರದಾಯಿಕ ಐಸ್‌ಕ್ರೀಮ್‌ಗೆ ನವೀನ ಮತ್ತು ಆರೋಗ್ಯ ಪ್ರಜ್ಞೆಯ ಪರ್ಯಾಯವಾದ ಮೈ ಫ್ರೊಯೋಲ್ಯಾಂಡ್(ಊ್ಟಟಟಔಚ್ಞ) ಐಸ್‌ಕ್ರೀಮ್ ಇದೀಗ ಸಾಂಸ್ಕೃತಿಕ ನಗರಿಯ ಮಾರುಕಟ್ಟೆ ಪ್ರವೇಶಿಸಿದ್ದು, ಐಸ್‌ಕ್ರೀಮ್ ಪ್ರಿಯರಿಗೆ ಖುಷಿ ಹೆಚ್ಚಿಸಿದೆ.

ಈ ಐಸ್‌ಕ್ರೀಮ್ ಭಾರತದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ಪ್ರಬಲ ಅಸ್ತಿತ್ವವನ್ನು ಸಾಧಿಸಿದ್ದು, ಎಲ್ಲ ವಯಸ್ಸಿನವರೂ ಇಷ್ಟಪಡುವ ಐಸ್‌ಕ್ರೀಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಮೈಸೂರಿನಂತಹ ಎರಡನೇ ಶ್ರೇಣಿಯ ನಗರದಲ್ಲೂ ತನ್ನ ಮಾರುಕಟ್ಟೆ ವಿಸ್ತರಿಸುತ್ತಿದೆ.
ಮೈ ಫ್ರೊಯೋಲ್ಯಾಂಡ್ ಇದುವರೆಗೂ 28 ಮಳಿಗೆಗಳನ್ನು ಯಶಸ್ವಿಯಾಗಿ ಪ್ರಾರಂಭಿಸಿದ್ದು, ಈ ಪೈಕಿ ಭಾರತದಲ್ಲೇ 26 ಮಳಿಗೆಗಳಿವೆ. ಮುಂಬೈನಲ್ಲಿ 9, ಹೈದರಾಬಾದ್‌ನಲ್ಲಿ 5 ಸೇರಿದಂತೆ ಬೆಂಗಳೂರು, ಕೋಲ್ಕತ್ತದಲ್ಲೂ ಮಳಿಗೆಗಳನ್ನು ತೆರೆದಿದೆ. ಇದೀಗ ಮೈಸೂರಿನ ವಾಣಿವಿಲಾಸ ಮೊಹಲ್ಲಾದಲ್ಲಿ ಮೈ ಫ್ರೊಯೋಲ್ಯಾಂಡ್ ಐಸ್‌ಕ್ರೀಮ್ ಮಳಿಗೆ ಆರಂಭವಾಗಿದೆ.

ಮೈ ಫ್ರೊಯೋಲ್ಯಾಂಡ್ ಇತರ ಐಸ್‌ಕ್ರೀಮ್ ಹಾಗೂ ಸಿಹಿ ತಿಂಡಿಗಳಿಗಿಂತ ವಿಭಿನ್ನವಾಗಿದೆ. ಅದು ಬಾಯಿಗೆ ಸಿಹಿ ನೀಡುವ ಜತೆಗೆ ತೂಕ ನಷ್ಟಕ್ಕೂ ಸಹಾಯಕಾರಿಯಾಗಿದೆ. ಸಿಹಿ ತಿಂಡಿ ತಿನ್ನುವ ಜತೆಗೆ ಆರೋಗ್ಯಕರ ಜೀವನ ಶೈಲಿ ಕಾಪಾಡಿಕೊಳ್ಳಲು ಇಷ್ಟಪಡುವವರಿಗೆ ಇದು ಸೂಕ್ತವಾಗಿದೆ. ಅನೇಕ ಪೋಷಕಾಂಶಗಳನ್ನು ಹೊಂದಿರುವ ಐಸ್‌ಕ್ರೀಮ್ ಆಗಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಬಾಯಿಗೆ ರುಚಿ ನೀಡುವುದರ ಜತೆಗೆ ಅನೇಕ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ ಎಂದು ಪ್ರಕಟಣೆ ತಿಳಿಸಿದೆ.