ಕೂಡ್ಲಿಗಿಯ ಪೇಟೆ ಬಸವೇಶ್ವರ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿರಿಸಿಕೊಂಡು ಮೆರವಣಿಗೆ ಮೂಲಕ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿಯಲಾಯಿತು. ಪ್ರಮುಖರಾದ ಹಿ.ಮ.ಚಿದಾನಂದ ಸ್ವಾಮಿ, ಎ.ಎಂ.ವೀರಯ್ಯ, ಕೋಗಳಿ ಮಂಜುನಾಥ, ತುಪ್ಪಳ್ಳಿ ಮೂಗಣ್ಣ,ವೀರೇಶ ಇತರರಿದ್ದರು. 
ಜಿಲ್ಲೆ

ಪರಸ್ಪರ ಶುಭ ಹಾರೈಕೆ

ರುದ್ರಪ್ಪ ವಾಲಿ

ಕೂಡ್ಲಿಗಿ: ವಿಜಯದಶಮಿಯನ್ನು ಪಟ್ಟಣ ಸೇರಿ ತಾಲೂಕಾದ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಬನ್ನಿಯನ್ನು ವಿನಿಮಯ ಮಾಡಿಕೊಂಡು ನಾವು- ನೀವು ಬಂಗಾರವಾಗಿ ಇರೋಣ ಎಂದು ಶುಭ ಹಾರೈಸಿದರು. ಸಂಜೆ ಜನರು ಒಗ್ಗೂಡಿ, ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಊರ ಹೊರವಲಯದ ಬನ್ನಿಮರಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಬನ್ನಿ ಮುಡಿದರು.

ಪಟ್ಟಣದಲ್ಲಿಯೂ ಶನಿವಾರ ಸಂಜೆ ಪೇಟೆ ಬಸವೇಶ್ವರ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಕೂಡಿಸಿಕೊಂಡು ಮೆರವಣಿಗೆ ಮೂಲಕ ಬಂದು ವೆಂಕಟೇಶ್ವರ ದೇವಸ್ಥಾನ ಬಳಿಯ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರೆ, ಮತ್ತೊಂದು ಕಡೆ ಕೊತ್ತಲಾಂಜನೇಯ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿಕೊಂಡು ಹೋಗಿ ಬಂಡೇಬಸಾಪುರ ರಸ್ತೆಯ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿಯಲಾಯಿತು.

ನಂತರ ಮನೆ, ಮನೆಗೆ ತೆರಳಿ ಬಂಧು ಮಿತ್ರರಿಗೆ, ನೆರೆ- ಹೊರೆಯವರಿಗೆ ಬನ್ನಿ ನೀಡಿ ಹಿರಿಯರಿಗೆ ನಮಸ್ಕರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.