ಜಿಲ್ಲೆ

ಅರುಣೋದಯ ವಿಶೇಷ ಅಗತ್ಯವುಳ್ಳ ಶಾಲಾ ಮಕ್ಕಳೊಂದಿಗೆ ಮುತ್ತಿನಪೆಂಡಿಮಠ ಜನ್ಮದಿನದ ಸಂಭ್ರಮ

Gadag - Shivanand Hiremath

ಗದಗ: ಗದುಗಿನ ಹಿರಿಯ ನ್ಯಾಯವಾದಿಗಳೂ, ಜನಪ್ರಿಯ ಮಾಜಿ ಶಾಸಕರೂ ಆಗಿದ್ದ ಸಿ.ಎಸ್.ಮುತ್ತಿನಪೆಂಡಿಮಠ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲವಾದರೂ ಅವರ ಜನಪರ ಕಾರ್ಯಗಳಿಂದ ಈಗಲೂ ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಸಿ.ಎಸ್.ಮುತ್ತಿನಪೆಂಡಿಮಠ ಪ್ರತಿಷ್ಠಾನ ಟ್ರಸ್ಟ್ ಸಮಾಜಮುಖಿ, ಜನಮುಖಿ ಕಾರ್ಯಗಳನ್ನು ಮುಂದುವರೆಸಲಿದೆ ಎಂದು ಟ್ರಸ್ಟ್ ಗೌರವಾಧ್ಯಕ್ಷ ಡಾ.ಎನ್.ಬಿ.ಪಾಟೀಲ ಹೇಳಿದರು.
ಅವರು ಶನಿವಾರ ನಗರದ ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಟ್ರಸ್ಟ್ದಿಂದ ಎರ್ಪಡಿಸಿದ್ದ ಲಿಂ.ಸಿ.ಎಸ್.ಮುತ್ತಿನಪೆAಡಿಮಠ ಅವರ ೯೪ನೇ ಜನ್ಮದಿನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ರೀಡೆ, ಸಾಂಸ್ಕೃತಿಕ, ಸಾಹಿತ್ಯಕ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ನ್ಯಾಯಾಂಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರನ್ನು ಗೌರವಿಸುವ, ದೇಹದಾನ, ನೇತ್ರದಾನ, ರಕ್ತದಾನ, ಆರೋಗ್ಯ ತಪಾಸಣೆ ಮುಂತಾದ ಕಾರ್ಯಗಳನ್ನು ಮಾಡಲು ಟ್ರಸ್ಟ್ ಬದ್ಧತೆಯಿಂದ ಕಾರ್ಯ ಮಾಡಲಿದೆ ಎಂದರು.
ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಹುಬ್ಬಳ್ಳಿಯ ಸೇವಾಭಾರತಿ ಟ್ರಸ್ಟ್ (ರಿ) ಕಾರ್ಯ ನಿಜಕ್ಕೂ ಶ್ಲಾö್ಯಘನೀಯವಾದದ್ದು ಎಂದ ಡಾ.ಎನ್.ಬಿ.ಪಾಟೀಲರು ಪ್ರತಿ ವರ್ಷ ತಮ್ಮ ಜನ್ಮದಿನದ ಸಂದರ್ಭದಲ್ಲಿ ಸಿ.ಎಸ್.ಮುತ್ತಿನಪೆಂಡಿಮಠ ಪ್ರತಿಷ್ಠಾನ ಟ್ರಸ್ಟ್ ಮೂಲಕ ವೈಯುಕ್ತಿಕವಾಗಿ ೧ ಲಕ್ಷ ರೂ.ಗಳನ್ನು ಈ ಶಾಲೆಗೆ ನೀಡುವೆ ಎಂದರು.
ಟ್ರಸ್ಟ್ನ ಅಧ್ಯಕ್ಷ ವಸಂತ ಮೇಟಿ ಮಾತನಾಡಿ ಅರುಣೋದಯ ಶಾಲೆಯು ವಿಶೇಷ ಅಗತ್ಯವುಳ್ಳ ಮಕ್ಕಳ ಸೇವೆಯಲ್ಲಿ ತನ್ನನ್ನು ಸಮರ್ಪಿಸಿಕೊಂಡಿರುವದು ದೇವರ ಕಾರ್ಯಕ್ಕೆ ಸಮರ್ಪಿಸಿಕೊಂಡAತೆ ಈ ಕೈಂಕರ್ಯಕ್ಕೆ ಟ್ರಸ್ಟದಿಂದ ೧೧ ಸಾವಿರ ರೂ.ಗಳನ್ನು ನೀಡುವದಾಗಿ ಹೇಳಿ ಚೆಕ್‌ನ್ನು ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಜಯರಾಜ ಮುಳಗುಂದ ಅವರಿಗೆ ಹಸ್ತಾಂತರಿಸಿದರು.
ಟ್ರಸ್ಟ್ ಕಾರ್ಯದರ್ಶಿ ಚಂದ್ರು ಬಾಳಿಹಳ್ಳಿಮಠ ಅವರು ಟ್ರಸ್ಟ್ ಸ್ಥಾಪನೆಯ ಉದ್ದೇಶ, ಟ್ರಸ್ಟ್ ನಡೆದು ಬಂದ ದಾರಿಯನ್ನು ವಿವರಿಸಿ ಮುತ್ತಿನಪೆಂಡಿಮಠ ಅವರ ಜನಪರ, ಸಮಾಜಪರ ಕಾರ್ಯಗಳನ್ನು ಟ್ರಸ್ಟ್ ಮುಂದುವರೆಸಿಕೊಡು ಬಂದಿದೆ. ಇಂದು ೧೦ ಕ್ಕೂ ಹೆಚ್ಚು ಜನರು ರಕ್ತದಾನ ಮಾಡುವ ಮೂಲಕ ಉದಾರತೆ ಮೆರೆದಿದ್ದಾರೆ, ಬರಲಿರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರಚನಾತ್ಮಕ ಕಾರ್ಯ ಮಾಡಲಿದೆ ಎಂದರು.
ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಗೆ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಪಿ.ಸಂಶಿಮಠ ಅವರನ್ನು ಟ್ರಸ್ಟ್ದಿಂದ ಸನ್ಮಾನಿಸಲಾಯಿತು. ವಿಶೇಷ ಅಗತ್ಯವುಳ್ಳ ಶಾಲಾ ಮಕ್ಕಳಿಗೆ ಸಿಹಿ ವಿತರಿಸಿ ಟ್ರಸ್ಟ್ನ ಪದಾಧಿಕಾರಿಗಳು, ಸದಸ್ಯರು ಸಂಭ್ರಮಿಸಿ ಶುಭ ಕೋರಿದರು.
ವೇದಿಕೆಯ ಮೇಲೆ ಟ್ರಸ್ಟ್ನ ಸಹ ಕಾರ್ಯದರ್ಶಿ ಸಂಗಮೇಶ್ವರ ಬಂಗಾರಶೆಟ್ಟರ, ಖಜಾಂಚಿ ಮಲ್ಲಿಕಾರ್ಜುನ ಸಿಕ್ಕೇದೇಸಾಯಿ, ವಿಜಯಾನಂದ ಮುತ್ತಿನಪೆಂಡಿಮಠ ಉಪಸ್ಥಿತರಿದ್ದರು. ಜಯರಾಜ ಮುಳಗುಂದ ಸ್ವಾಗತಿಸಿದರು, ಶಾಲಾ ಮುಖ್ಯೋಪಾಧ್ಯಾಯ ಮಲ್ಲಪ್ಪ ಹಕ್ಕಿ ನಿರೂಪಿಸಿ ವಂದಿಸಿದರು.
ಸಮಾರಂಭದಲ್ಲಿ ಟ್ರಸ್ಟ್ ಸದಸ್ಯರಾದ ಈಶಣ್ಣ ಮುನವಳ್ಳಿ, ಲತಾ ಮುತ್ತಿನಪೆಂಡಿಮಠ, ಪ್ರಶಾಂತ ಶಾಬಾದಿಮಠ, ಎಫ್.ಎಸ್.ಸಿಂಧಗಿ, ಶಾಲಾ ಆಡಳಿತ ಮಂಡಳಿಯ ಕೋಶಾಧ್ಯಕ್ಷ ಜೀತೇಂದ್ರ ಶಹಾ, ಸದಸ್ಯ ಬಸವರಾಜ ನಾಗಲಾಪೂರ ಅಲ್ಲದೆ ಶಾಂತಯ್ಯ ಮುತ್ತಿನಪೆಂಡಿಮಠ, ಇನ್ನರ್‌ವ್ಹೀಲ್ ಕ್ಲಬ್ ಗದಗ ಮಿಡ್‌ಟೌನ್ ಅಧ್ಯಕ್ಷೆ ಬಿರಾದಾರ, ಕಾರ್ಯದರ್ಶಿ ಪ್ರೀತಿ ಶಿವಪ್ಪಯ್ಯನಮಠ, ಸುವರ್ಣಾ ಹೊನ್ನಗುಡಿ, ಆರತಿ ಜೀರಂಕಳಿ, ಮಧುಮತಿ, ಲಲಿತಾ ಅಳವಂಡಿ, ಜಗದೀಶ ಹಡಪದ, ಜಯಶ್ರೀ ಭಾವರೆ, ರೇಣುಕಾ ದಾಸರ, ವೀಣಾ ಕೊಲ್ಲಾಪುರೆ, ಮಲ್ಲಿಕಾರ್ಜುನ ನಾಗಲಾಪೂರ ಮುಂತಾದವರಿದ್ದರು.