ಭೂಗತ ದೊರೆಯಾಗಿ ಅನೇಕರಲ್ಲಿ ನಡುಕ ಹುಟ್ಟಿಸಿದ್ದ ಮುತ್ತಪ್ಪ ರೈ  
ಜಿಲ್ಲೆ

2 ಸಾವಿರ ಕೋಟಿ ರೂ. ಒಡೆಯನಾಗಿದ್ದ ಮುತ್ತಪ್ಪ ರೈ

ಬೆಂಗಳೂರು: ಕ್ಯಾನ್ಸರ್‌ಗೆ ತುತ್ತಾಗಿ ಮೃತಪಟ್ಟ ಭೂಗತ ದೊರೆ ಮುತ್ತಪ್ಪ ರೈ ವಿಲ್ ಪತ್ರದ ರಹಸ್ಯ ಬಹಿರಂಗಗೊಂಡಿದ್ದು, ರೈ ಹೆಸರಿನಲ್ಲಿ ಅಂದಾಜು 1,500 ರಿಂದ 2 ಸಾವಿರ ಕೋಟಿ ರೂ. ಚರಾ ಮತ್ತು ಸ್ಥಿರಾಸ್ತಿ ಇದೆ ಎಂದು ಹೇಳಲಾಗುತ್ತಿದೆ.

ಮಕ್ಕಳು ಹಾಗೂ ಸಂಬಂಧಿಕರು ಮಾತ್ರವಲ್ಲದೇ ಮನೆ ಹಾಗೂ ತೊಟದ ಕೆಲಗಾರರು, ಚಾಲಕರು ಮತ್ತು ಗನ್‌ಮ್ಯಾನ್‌ಗಳಿಗೂ ಆಸ್ತಿ ಹಂಚಿದ್ದಾರೆ.

41 ಪುಟಗಳ ವಿಲ್ ಬರೆದಿಟ್ಟಿದ್ದ ರೈ ಹೆಸರಿನಲ್ಲಿ ಅಂದಾಜು 1500-2000 ಕೋಟಿ ರೂ. ಆಸ್ತಿ ಇದೆ. 15 ವರ್ಷಗಳಿಂದ ಮನೆಗೆಲಸ ಮಾಡಿರುವ ನಂಬಿಕಸ್ಥ 25 ಕೆಲಸಗಾರರ ಹೆಸರನ್ನು ವಿಲ್ನಲ್ಲಿ ಉಲ್ಲೇಖ ಮಾಡಿದ್ದಾರೆಂದು ರೈ ವಕೀಲರಾದ ಜಿ.ನಾರಾಯಣ ಸ್ವಾಮಿ ತಿಳಿಸಿದ್ದಾರೆ.

ರೈ ಆಸ್ತಿ-ಪಾಸ್ತಿಗಳೆಷ್ಟು?

ರಾಕಿ ರೈ, ರಿಕಿ ರೈಗೆ ಆಸ್ತಿ ಹಂಚಿಕೆ ಮಾಡಿದ್ದಾರೆ. ಸಕಲೇಶಪುರದಲ್ಲಿ 150 ರಿಂದ 200 ಎಕರೆ ಜಮೀನು, ದೇವನಹಳ್ಳಿ, ಯಲಹಂಕ ಮತ್ತು ಬಿಡದಿಯಲ್ಲಿ 150ಕ್ಕೂ ಅಧಿಕ ಎಕರೆ ಜಾಗ ಸೇರಿ ರಾಜ್ಯದಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ 600ಕ್ಕೂ ಹೆಚ್ಚು ಎಕರೆ ಜಮೀನು ಇದೆ. ಆಪ್ತರು ಹಾಗೂ ಸಂಬಂಧಿಕರಿಗೆ ಶೇ.20 ರಷ್ಟು ಮಾತ್ರ ಆಸ್ತಿ ಹಂಚಿಕೆ ಮಾಡಿದ್ದಾರೆ.ಬಿಡದಿ ಹಾಗೂ ಸದಾಶಿವನಗರದ ಮನೆ, ಯಲಹಂಕ ಹಾಗೂ ದೇವನಹಳ್ಳಿ ಜಾಗ ಸೇರಿ ಸಕಲೇಶಪುರದ 150ಕ್ಕೂ ಹೆಚ್ಚು ಎಕರೆ ಕಾಫಿ ತೋಟವನ್ನು ಕಿರಿಯ ಮಗ ರಿಕ್ಕಿ ರೈ ಹೆಸರಿಗೆ ಬರೆಯಲಾಗಿದ್ದು, ಷೇರು ವ್ಯವಹಾರ, ಜಯ ಕರ್ನಾಟಕ ಸಂಘಟನೆ, ಬಂಟ್ವಾಳ, ಮಂಗಳೂರು, ಮೈಸೂರು ಹಾಗೂ ಪುತ್ತೂರು ಸೇರಿ ವಿವಿಧ ಭಾಗಗಳಲ್ಲಿರುವ ಜಮೀನನ್ನು ಹಿರಿಯ ಮಗ ರಾಕಿ ರೈ ಹೆಸರಿಗೆ ಬರೆದಿದ್ದಾರೆ ಎನ್ನಲಾಗಿದೆ.

ಮಕ್ಕಳಿಗೆ 1 ಸಾವಿರ ಕೋಟಿ ರೂ: ಸಂಘಟನೆ ಯಾವುದೇ ಕಾರಣಕ್ಕೂ ನಶಿಸಿಹೋಗದಂತೆ ನೋಡಿಕೊಳ್ಳಲು ಹಾಗೂ ಅಧ್ಯಕ್ಷ ಜಗದೀಶ್ ಇದನ್ನು ನೋಡಿಕೊಳ್ಳುವಂತೆಯೂ ರಾಕಿ ರೈಗೆ ವಿಲ್ನಲ್ಲಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಬೆಳೆಸುವಂತೆ ಕಾರ್ಯಕರ್ತರಿಗೆ ವಿಲ್ನಲ್ಲಿ ಮನವಿ ಮಾಡಿದ್ದಾರೆ. ಇಬ್ಬರು ಮಕ್ಕಳಿಗೂ ಅಂದಾಜು 1 ಸಾವಿರ ಕೋಟಿಯಷ್ಟು ಆಸ್ತಿ ಬರಲಿದೆ ಎನ್ನಲಾಗುತ್ತಿದೆ.

ಎರಡನೇ ಪತ್ನಿಗೂ ಆಸ್ತಿ: ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ಅವರಿಗೂ ಆಸ್ತಿ ಹಂಚಿಕೆ ಮಾಡಲಾಗಿದ್ದು, ಎಚ್.ಡಿ. ಕೋಟೆಯಲ್ಲಿರುವ ಆಸ್ತಿ, ಚಿನ್ನಾಭರಣ, ಐಷಾರಾಮಿ ಕಾರು, ಕೊಟ್ಯಾಂತರ ರೂಪಾಯಿಯನ್ನು ಈಗಾಗಲೇ ರೈ ನೀಡಿದ್ದಾರೆ.

ಕೆಲಸಗಾರರಿಗೆ 3 ಲಕ್ಷ ರೂ.: ಕೆನಡಾದಲ್ಲಿರುವ ಪುತ್ರ ರಾಕಿ ರೈ ಅವರು ಸ್ವದೇಶಕ್ಕೆ ಮರಳಿದ ಬಳಿಕ ಈ ಹಂಚಿಕೆ ಕೆಲಸ ಮುಂದುವರೆಯಲಿದೆ. ರಿಕ್ಕಿ ರೈ ಕೆಲಸಗಾರರ ಬ್ಯಾಂಕ್ ಖಾತೆಗೆ ಈಗಾಗಲೇ 3 ಲಕ್ಷ ರೂ. ಹಾಕಿದ್ದಾರೆ. ವಕೀಲಗೀತಾರಾಜ್ ವಿಲ್‌ನ ಡ್ರ್‌ಟಾ ಮಾಡಿದ್ದಾರೆ ಎಂದು ಮುತ್ತಪ್ಪ ರೈ ಅವರ ವಕೀಲ ಜಿ.ನಾರಾಯಣಸ್ವಾಮಿ ತಿಳಿಸಿದ್ದಾರೆ.