ಜಿಲ್ಲೆ

ಮುತ್ತಪ್ಪ ತೆರೆ ಮಹೋತ್ಸವ

ಸುನಿಲ್ ಪೊನ್ನೇಟಿ
ಕುಶಾಲನಗರ:
  ಇಲ್ಲಿನ ಬೈಚನಳ್ಳಿಯ ಯೋಗಾನಂದ ಬಡಾವಣೆಯ ಕಾವೇರಿ ನದಿ ತಟದಲ್ಲಿರುವ ಶ್ರೀ ಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ಶನಿವಾರದಿಂದ ಆರಂಭವಾಗಿರುವ ತೆರೆ ಮಹೋತ್ಸವಕ್ಕೆ ಭಾನುವಾರ ಅದ್ದೂರಿಯಾಗಿ ತೆರೆ ಬಿದ್ದಿತು. ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಗ್ಗೆ  5 ಗಂಟೆಗೆ ತಿರುವಪ್ಪನ ವೆಳ್ಳಾಟಂ‌, ಮುತ್ತಪ್ಪ ವೆಳ್ಳಾಟಂ ನಡೆದವು. ಮಧ್ಯಾಹ್ನ 12.30ಕ್ಕೆ ಅನ್ನದಾನ ಏರ್ಪಡಿಸಲಾಗಿತ್ತು. ಜಿಲ್ಲೆಯಾದ್ಯಂತದಿಂದ ಆಗಮಿಸಿದ್ದ ಭಕ್ತರು ಶ್ರೀ ದೈವದ ದರ್ಶನ ಪಡೆದು ಕೃತಾರ್ಥರಾದರು.
ಈ ಸಂದರ್ಭದಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವರದ, ಟ್ರಸ್ಟ್ ಪದಾಧಿಕಾರಿಗಳು ಮತ್ತು ದೇವಾಲಯ ಸಮಿತಿಯ ಸದಸ್ಯರುಗಳು ಇದ್ದರು.