ಕೊಟ್ಟೂರು: ಶಿಕ್ಷಕರ ಮಾರ್ಗದರ್ಶನ ಇರುತ್ತದೆ ಆದರೆ, ಗುರಿ ಮುಟ್ಟುವ ಹೊಣೆ ನಿಮ್ಮದು ಎಂದು ಕೊಟ್ಟೂರೇಶ್ವರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನ ರೆಡ್ಡಿ ಹೇಳಿದರು.
ಇದನ್ನೂ ಓದಿ:ಗುರುವಿನ ಮಾರ್ಗದರ್ಶನದಲ್ಲಿ ಉನ್ನತಿ
ನಗರದ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಶನಿವಾರ ಎಂಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಎಂಕಾಂ ಅಂತಿಮ ವಿದ್ಯಾರ್ಥಿನಿ ಕರೇಗೌಡ್ರು ದಿವ್ಯಾ ಅವರ ಚೊಚ್ಚಲ ಕೃತಿ ನಿಮ್ಮ ಜೀವನ ನಿಮ್ಮ ಆಯ್ಕೆ:ನನ್ನ ಅನುಭವ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲೇ ಸಾಧನೆಯ ಮೆಟ್ಟಿಲೇರಬೇಕು ಎಂದರು.
ಪ್ರಾಚಾರ್ಯೆ ನಿರ್ಮಲ ಶಿವನಗುತ್ತಿ. ಚಿಕ್ಕವಯಸ್ಸಿನಲ್ಲೇ ಲೋಕಾನುಭವದ ಮೂಲಕ ವಿದ್ಯಾರ್ಥಿಗಳು ತಮ್ಮನ್ನು ಹೇಗೆ ರೂಪಿಸಿಕೊಳ್ಳಲು ಪುಸ್ತಕ ಮಾರ್ಗದರ್ಶನವಾಗಬಲ್ಲದು ಎಂದರು. ತಹಸೀಲ್ದಾರ್ ಜಿ.ಕೆ.ಅಮರೇಶ ಮಾತನಾಡಿ, ನಿರ್ಧಿಷ್ಟ ಗುರಿಯೊಂದಿಗೆ ಪೂರಕ ಸಿದ್ದತೆ ಮತ್ತು ಕಠಿಣ ಶ್ರಮದಿಂದ ಉತ್ತನಸ್ಥಾನಕೇರಲು ಸಾಧ್ಯ ಎಂದರು.
ಪ್ರಾಚಾರ್ಯ ಡಾ.ಎಂ.ರವಿಕುಮಾರ್ ಮಾತನಾಡಿ, ನಮ್ಮ ಕಾಲೇಜು ವಿವಿ ಮಟ್ಟದ ಐದನೇ ಸ್ಥಾನದಲ್ಲಿದೆ. ಪಠ್ಯದ ಜತೆ ಪಠ್ಯೇತರ ಚಟುಚಟಿಕೆಗಳಲ್ಲಿ ಸದಾ ಮುಂಚೋಣಿಯಲ್ಲಿದೆ ಎಂದರು.
ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಗೂಳಿ ಮಲ್ಲಿಕಾರ್ಜುನ, ಟಿ.ಎಂ.ಗೀರೀಶ, ಉಪನ್ಯಾಸಕರಾದ ಗುರುಲಿಂಗನಗೌಡ, ಸುರೇಶ, ಶರಣೇಶ ಇತರರಿದ್ದರು.