ಜಿಲ್ಲೆ

ಮುಸ್ಲಿಂ ಲೀಗ್ ಕಾರ್ಯಕರ್ತನ ಕೊಲೆ: ಸಿಪಿಎಂ ಕಾರ್ಯಕರ್ತ ವಶಕ್ಕೆ

Dakshina Kannada

ಕಾಸರಗೋಡು: ಕಣ್ಣೂರು ಜಿಲ್ಲೆಯ ಪಾಣೂರಿನಲ್ಲಿ ಚುನಾವಣಾ ಘರ್ಷಣೆಯಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತ ಪುಲ್ಲುಕ್ಕರ ಪಾರಾಲ್ ನಿವಾಸಿ ಮನ್ಸೂರ್(22) ಎಂಬಾತ ಮೃತಪಟ್ಟಿದ್ದಾನೆ. ಇವರ ಸಹೋದರ ಮುಹ್‌ಸೀನ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ಕಾರ್ಯಕರ್ತ ಶಿನೋಸ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೊಲೆ ಕೃತ್ಯದ ಹಿಂದೆ ಸಿಪಿಎಂ ಕೈವಾಡದ ಬಗ್ಗೆ ಮುಸ್ಲಿಂ ಲೀಗ್ ಮುಖಂಡರು ಆರೋಪಿಸಿದ್ದಾರೆ. 11 ಮಂದಿಯ ತಂಡ ಕೃತ್ಯವೆಸಗಿರುವುದಾಗಿ ಮಾಹಿತಿ ಲಭಿಸಿದೆ.

ಮನ್ಸೂರ್ ತನ್ನ ಮನೆಯಿಂದ ಹೊರಬರುತ್ತಿರುವುದನ್ನು ಕಾದು ಕುಳಿತಿದ್ದ ತಂಡ ಬಾಂಬ್ ಎಸೆದು, ನಂತರ ಕಡಿದು ಬರ್ಬರವಾಗಿ ಕೊಲೆ ನಡೆಸಿದೆ. ಇವರ ಸಹೋದರ ಮಹ್‌ಸೀನ್ ಕೂಡ ಗಾಯಗೊಂಡಿದ್ದು, ಇಬ್ಬರನ್ನೂ ಕೋಯಿಕ್ಕೋಡಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮನ್ಸೂರ್ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಮತದಾನದಂದು ಬೆಳಗ್ಗೆಯಿಂದಲೇ 149 ಹಾಗೂ 150ನೇ ಮತಗಟ್ಟೆಗಳಲ್ಲಿ ಸಣ್ಣಪುಟ್ಟ ಘರ್ಷಣೆ, ವಾಗ್ವಾದ ಉಂಟಾಗಿದ್ದು, ಸಾಯಂಕಾಲ ವೇಳೆ ಮತ್ತೆ ಬಿರುಸು ಪಡೆದಿತ್ತು.