ಪಟ್ಟಣದ ಕಾವೇರಿ ರಸ್ತೆ ಸಮೀಪವಿರುವ ಶ್ರೀ ರಾಮ ಮಂದಿರ ಮುಂಭಾಗ ಪ್ರತಿಷ್ಠಾಪಿಸಿರುವ ಶ್ರೀ ಗಣೇಶನಿಗೆ ಬುಧವಾರ ಮುಸ್ಲಿಂ ಮುಖಂಡರು ಪೂಜೆ ಸಲ್ಲಿಸಿದ ಬಳಿಕ ಪ್ರಸನ್ನ ವೀರಾಂಜನೇಯ ದೇವಾಲಯದ ಪ್ರಧಾನ ಅರ್ಚಕ ಟಿ.ವಿ.ಎಸ್. ರಾಘವನ್ ಅವರಿಗೆ ಸಿಹಿ ವಿತರಿಸಿದರು. 
ಜಿಲ್ಲೆ

ಮುಸ್ಲಿಂ ಮುಖಂಡರಿಂದ ಗಣೇಶನ ಪೂಜೆ

ಕೊಳ್ಳೇಗಾಲ: ಪಟ್ಟಣದ ಕಾವೇರಿ ರಸ್ತೆ ಸಮೀಪವಿರುವ ಶ್ರೀ ರಾಮ ಮಂದಿರ ಮುಂಭಾಗ ಪ್ರತಿಷ್ಠಾಪಿಸಿರುವ ಶ್ರೀ ಗಣೇಶ ಮೂರ್ತಿಗೆ ಬುಧವಾರ ಮುಸ್ಲಿಂ ಮುಖಂಡರು ಪೂಜೆ ಸಲ್ಲಿಸಿದರು.

ಪ್ರಸನ್ನ ವೀರಾಂಜನೇಯ ದೇವಸ್ಥಾನದ ಪ್ರಧಾನ ಅರ್ಚಕ ಟಿ.ವಿ.ಎಸ್. ರಾಘವನ್ ಅವರು ಮುಸ್ಲಿಂ ಮುಖಂಡರಿಗೆ ಸಿಹಿ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಶಾಂತರಾಜು, ನಾಮ ನಿರ್ದೇಶಿತ ಸದಸ್ಯ ಅನ್ಸರ್ ಬೇಗ್, ಮುಖಂಡರಾದ ನಟರಾಜು ಮಾಳಿಗೆ, ಪ್ರಭುಸ್ವಾಮಿ, ಇನಾಯತ್ ಪಾಷ, ಮನ್ಸೂರ್ ಪಾಷ, ಮೊಹಮ್ಮದ್ ಇಮ್ದಾದ್‌ವುಲ್ಲಾ, ನಿಸಾರ್ ಅಹಮ್ಮದ್, ಆರೀಪ್‌ವುಲ್ಲಾ, ವಸೀಮ್, ಮಹಮ್ಮದ್ ಅತೀಖ್, ಶಹದಬ್ ಅಹಮ್ಮದ ಇತರರಿದ್ದರು.\