ಜಿಲ್ಲೆ

ಸ್ಟಾಲಿನ್ ಹೇಳಿಕೆಗೆ ಮುಸ್ಲಿಂ ಮುಖಂಡ ಖಂಡನೆ

Davangere - Desk - Mahesh Babu E

ಚಳ್ಳಕೆರೆ: ಸನಾತನ ಧರ್ಮದ ವಿರುದ್ಧ ತಮಿಳುನಾಡಿನ ಸಚಿವ ದಯಾನಿಧಿ ಸ್ಟಾಲಿನ್ ಹೇಳಿಕೆ ನೀಡಿರುವುದು ಲಕ್ಷಾಂತರ ಜನರ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಮುಸ್ಲಿಂ ಮುಖಂಡ, ಸಮಾಜ ಸೇವಕ ಎಚ್.ಎಸ್.ಸೈಯದ್ ತಿಳಿಸಿದ್ದಾರೆ.

ಸನಾತನ ಧರ್ಮ ಪಾಲಿಸುವ ಶೃಂಗೇರಿ ಶಾರದಾ ಪೀಠ ಸೇರಿ ದೇಶದಲ್ಲಿ ನಾಲ್ಕು ಪೀಠಗಳನ್ನು ಆದಿಗುರು ಶಂಕರಾಚಾರ್ಯರು ಸ್ಥಾಪನೆ ಮಾಡಿದ್ದಾರೆ. ಈ ಪೀಠಗಳಿಗೆ ಲಕ್ಷಾಂತರ ಭಕ್ತಾಧಿಗಳು ಇದ್ದಾರೆ. ಇಂತಹ ಸಂದರ್ಭ ಸಾಮಾಜಿಕ ಸೂಕ್ಷ್ಮತೆ ಇಲ್ಲದೆ ಧಾರ್ಮಿಕ ಮನೋಭಾವನೆಗೆ ಧಕ್ಕೆ ತರುವ ರೀತಿ ಸ್ಟಾಲಿನ್ ಹೇಳಿಕೆ ನೀಡಿರುವುದು ಸರಿಯಲ್ಲ ಎಂದಿದ್ದಾರೆ.

ಜಗತ್ತಿನ ಎಲ್ಲ ಧರ್ಮಗಳು ಅತ್ಯಂತ ಶ್ರೇಷ್ಠ ಗುಣ ಹೊಂದಿದ್ದು, ಕೆಲ ಸಣ್ಣಪುಟ್ಟ ದೋಷಗಳನ್ನೇ ದೊಡ್ಡದಾಗಿ ಬಿಂಬಿಸಿ, ಧರ್ಮದ ವಿರುದ್ಧ ಟೀಕೆ ಮಾಡುದು ತಪ್ಪು.

ಜನಪ್ರತಿನಿಧಿಗಳು ಸಮಾಜದ ಶಾಂತಿ ಕಾಪಾಡುವ ದೃಷ್ಟಿಕೋನ ಇರಿಸಿಕೊಳ್ಳಬೇಕು. ಸಮಾಜದಲ್ಲಿನ ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳ ಪರಿಹಾರಕ್ಕೆ ಸದಾ ಚಿಂತನೆ ನಡೆಸಬೇಕು. ಅದನ್ನು ಹೊರತುಪಡಿಸಿ ರಾಜಕೀಯ ಕಾರಣಕ್ಕಾಗಿ ಇಂತಹ ಹೇಳಿಕೆ ನೀಡುವುದು ಖಂಡನೀಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.