ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಮೈಲಪನಹಳ್ಳಿಯ ಹಿಂದು ಯುವಕ ಹಾಗೂ ಮುಸ್ಲಿಂ ಯುವತಿ ದೇವಾಲಯದಲ್ಲಿ ಮದುವೆಯಾಗಿ ನೂತನ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.
ಇಲ್ಲಿನ ನಾಗಾರ್ಜುನ ಹಾಗೂ ಸೀಹಾ ಪರಸ್ಪರ ಎರಡ್ಮೂರು ವರ್ಷದಿಂದ ಪ್ರೀತಿಸುತ್ತಿದ್ದರು. ಎದುರು ಬದುರು ಮನೆಗಳಲ್ಲಿರುವ ಇಬ್ಬರು ಮೊದಲು ವಾಟ್ಸ್ಾ ಮೂಲಕ ಸಂದೇಶಗಳನ್ನು ಕಳುಹಿಸಿಕೊಳ್ಳುವುದು, ಮಾತುಕತೆಯಲ್ಲಿ ತೊಡಗುವುದು ಸೇರಿದಂತೆ ಸ್ನೇಹ ಸಂಬಂಧವು ಪ್ರೀತಿ ಪ್ರೇಮವಾಗಿ ಪರಿವರ್ತನೆಯಾಗಿದೆ. ಇದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಎರಡೂ ಕಡೆ ಪಾಲಕರು ವಿರೋಧ ವ್ಯಕ್ತಪಡಿಸಿ, ಬೇರ್ಪಡಿಸಲು ಯತ್ನಿಸಿದ್ದಾರೆ. ಕೊನೆಗೆ ಜೋಡಿಗಳು ಪೊಲೀಸ್ ಠಾಣೆಗೆ ಬಂದು ರಕ್ಷಣೆ ಪಡೆದುಕೊಂಡಿದ್ದು ಇಬ್ಬರು ಪರಸ್ಪರ ಒಪ್ಪಿಗೆ ಪ್ರೀತಿಸಿ ಮದುವೆಯಾಗುವುದಾಗಿ ಹೇಳಿದ್ದಾರೆ. ಕೊನೆಗೆ ದೇಗುಲಕ್ಕೆ ತೆರಳಿ ವಿವಾಹವಾಗಿದ್ದಾರೆ. ಇವರಿಗೆ ಪೊಲೀಸರು ಕಾನೂನಾತ್ಮಕ ನೆರವು ಒದಗಿಸಿ, ಹಾಗೆಯೇ ದಂಪತಿ ತಂಟೆಗೆ ಹೋಗದಂತೆ ಎರಡು ಕುಟುಂಬಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇನ್ನೂ ರಾಜೀ ಸಂಧಾನದ ಮೂಲಕ ಪ್ರೇಮ ವ್ಯವಹಾರಕ್ಕೆ ಅಂತ್ಯವಾಡುವ ದೊಡ್ಡವರ ಕಸರತ್ತು ಕೊನೆಗೂ ಯಶಸ್ವಿಯಾಗಲಿಲ್ಲ.