ಮಸ್ಕಿ, ಪೌರ ಕಾರ್ಮಿಕರ ಬೇಡಿಕೆ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಒತ್ತಾಯ, Musky, Urban workers demand, former MLA Pratap Gowda Patil, urge, 
ಜಿಲ್ಲೆ

ಪತ್ರ ಬರೆಯುವೆ ಎಂದ ಮಾಜಿ ಶಾಸಕ

ಮಸ್ಕಿ: ಪೌರ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಒತ್ತಾಯಿಸಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಪೌರ ಕಾರ್ಮಿಕರು ಕೈಗೊಂಡು ಧರಣಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದರು. ಪೌರ ಕಾರ್ಮಿಕರ ಸಮಸ್ಯೆಗಳ ಪರಿಹಾರ ಕುರಿತು ಸರ್ಕಾರಕ್ಕೆ ಪತ್ರ ಹಾಗೂ ಈ ಕುರಿತು ಚರ್ಚಿಸುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕಗೆ ಮನವಿ ಮಾಡುವುದಾಗಿ ತಿಳಿಸಿದರು.

ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಉಪಾಧ್ಯಕ್ಷೆ ಗೀತಾ ಶಿವರಾಜ ಬುಕ್ಕಣ್ಣ, ಪುರಸಭೆ ಸದಸ್ಯರಾದ ರವಿಗೌಡ ಪಾಟೀಲ್, ಚೇತನ ಪಾಟೀಲ್, ಸುರೇಶ ಹರಸೂರು ಹಾಗೂ ಡಾ.ಬಿ.ಎಚ್.ದಿವಟರ್, ಜಗದೀಶ, ಶಿವಣ್ಣ ಇತರರಿದ್ದರು.

ಮಸ್ಕಿ ಪುರಸಭೆ ಆವರಣದಲ್ಲಿ ಧರಣಿ ನಿರತ ಪೌರ ಕಾರ್ಮಿಕರಿಂದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮನವಿ ಸ್ವಿಕರಿಸಿದರು. ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಉಪಾಧ್ಯಕ್ಷೆ ಗೀತಾ ಶಿವರಾಜ ಬುಕ್ಕಣ್ಣ, ಡಾ.ಬಿ.ಎಚ್.ದಿವಟರ್, ರವಿಗೌಡ ಪಾಟೀಲ್ ಇತರರಿದ್ದರು.