ಮಸ್ಕಿ ಪಿಎಸ್‌ಐ ಮುದ್ದುರಂಗಸ್ವಾಮಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಜಿಪಂ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ, ಪ್ರಮುಖರಾದ ದಾನಪ್ಪ ಸಿ, ದೊಡ್ಡಕರಿಯಪ್ಪ, ಹನುಮಂತಪ್ಪ ವೆಂಕಟಾಪುರ, ಮಲ್ಲಯ್ಯ ಬಳ್ಳಾ, ಮೌನೇಶ ಮುರಾರಿ, ಕಾಸಿಮಪ್ಪ ಮುರಾರಿ, ಅಶೋಕ ಮುರಾರಿ, ಗಂಗಾಧರ, ಶ್ರೀಕಾಂತ, ಕಿರಣ ಇತರರಿದ್ದರು. 
ಜಿಲ್ಲೆ

ಮಾದಕ ವಸ್ತುಗಳ ಮಾರಾಟ ತಡೆಯಿರಿ; ಪಿಎಸ್‌ಐ ರಂಗಸ್ವಾಮಿ

ಪ್ರವೀಣ ಉದುಸಾ ದಲಬಂಜನ್

ಮಸ್ಕಿ: ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಲು ಒತ್ತಾಯಿಸಿ ಪಟ್ಟಣದ ನಿವಾಸಿಗಳು ಇಲ್ಲಿನ ಪಿಎಸ್‌ಐ ಮುದ್ದ ರಂಗಸ್ವಾಮಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಪಟ್ಟಣದ ಮಾದಕ ವ್ಯಸನಿ ಯುವಕನೊಬ್ಬ ಪುರಸಭೆ ನೌಕರನಿಗೆ ಮೇಲೆ ಕಲ್ಲು ಎಸೆದಿದ್ದಾನೆ. ಅವನನ್ನು ಕೂಡಲೇ ಬಂಧಿಸಬೇಕು. ಅಲ್ಲದೇ ದುಶ್ಚಟಕ್ಕೆ ಯುವಕರು ದಾಸರಾಗದಂತೆ ಜಾಗೃತಿ ಮೂಡಿಸಬೇಕು ಎಂದು ಆಗ್ರಹಿಸಿದರು.

ಜಿಪಂ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ ಮಾತನಾಡಿ, ಪಟ್ಟಣದಲ್ಲಿ ಯುವಕರು ಗಾಂಜಾ, ಅಫೀಮು, ಡ್ರಗ್ಸ್‌ಗಳಿಗೆ ದಾಸರಾಗುತ್ತಿದ್ದಾರೆ. ಇದರಿಂದ ಶಾಂತಿ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ. ಮಾದಕ ವಸ್ತುಗಳು ಯುವಕರಿಗೆ ಸುಲಭವಾಗಿ ದೊರೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ಮಾದಕ ವಸ್ತುಗಳ ಮಾರಾಟ ಜಾಲವನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಾಹಿತಿ ದಾನಪ್ಪ ಸಿ, ಪುರಸಭೆ ಸದಸ್ಯ ದೊಡ್ಡಕರಿಯಪ್ಪ, ಪ್ರಮುಖರಾದ ಹನುಮಂತಪ್ಪ ವೆಂಕಟಾಪುರ, ಮಲ್ಲಯ್ಯ ಬಳ್ಳಾ, ಮೌನೇಶ ಮುರಾರಿ, ಕಾಸಿಮಪ್ಪ ಮುರಾರಿ, ಅಶೋಕ ಮುರಾರಿ, ಗಂಗಾಧರ, ಶ್ರೀಕಾಂತ, ಕಿರಣ ಇತರರಿದ್ದರು.

ದೂರು ದಾಖಲು

ಪುರಸಭೆ ನೌಕರ ಮಾರುತಿಗೆ ಕಲ್ಲು ಎಸೆದ ಪಟ್ಟಣದ ಜಯಪ್ರಸಾದ ಎಂಬ ಯುವಕನನ್ನು ಬಂಧಿಸುವಂತೆ ಪುರಸಭೆ ನೌಕರರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು. ಮುಖ್ಯಾಧಿಕಾರಿ ನರಸರಡ್ಡಿ, ಪೌರ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಶಿವಣ್ಣ ಇದ್ದರು.