ಮಸ್ಕಿ: ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಕಿತ್ತೂರು ಚನ್ನಮ್ಮ ಭಾವಚಿತ್ರಕ್ಕೆ ಶಾಸಕ ಆರ್.ಬಸನಗೌಡ. ತುರ್ವಿಹಾಳ ಬುಧವಾರ ಮಾಲಾಪರ್ಣೆ ಮಾಡಿದರು. ತಹಸೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ತಹಸಿಲ್ ಹಾಗೂ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಜಯಂತಿ ಆಚರಿಸಲಾಯಿತು. ಪಂಚಮಸಾಲಿ ಸಮುದಾಯದ ಪ್ರಮುಖರಾದ ಚಂದ್ರಮೌಳೇಶ್ವರ ತಾತ, ಅಮರಪ್ಪ ಅಂಗಡಿ, ಬಸವರಾಜ ನಾಯಿಕೊಡೆ, ಅಮರಪ್ಪ ಗುಡದೂರು, ಬಸನಗೌಡ ಪೊಲೀಸ್ ಪಾಟೀಲ, ಶರಣಯ್ಯ ಸೊಪ್ಪಿಮಠ, ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಮುಖರು ಭಾಗವಹಿಸಿದ್ದರು