ಮಸ್ಕಿ: ಪ್ರಯಾಣಿಕರೊಬ್ಬರು ಬಸ್‌ನಲ್ಲೇ ಬಿಟ್ಟು ಹೋಗಿದ್ದ ಲಗೇಜ್, ಬ್ಯಾಗ್‌ಅನ್ನು ವಾಪಸ್ ನೀಡುವ ಮೂಲಕ ಈಶಾನ್ಯ ಸಾರಿಗೆ ಸಂಸ್ಥೆಯ ಪಟ್ಟಣದ ಡಿಪೋ ಮ್ಯಾನೇಜರ್, ಬಸ್ ಚಾಲಕ ಮತ್ತು ನಿರ್ವಾಹಕ ಮಾನವೀಯತೆ ಮೆರೆದಿದ್ದಾರೆ.
ನಡೆದದ್ದೇನು?: ಕಲಬುರಗಿ-ಬಳ್ಳಾರಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದ ಬಸು ಡಿ. ಪವಾರ ಲಗೇಜ್ ಹಾಗೂ ಬ್ಯಾಗ್ ಬಿಟ್ಟು ಇಳಿದಿದ್ದರು. ಬಸ್ ವಾಪಸ್ ಮಸ್ಕಿ ಡಿಪೋಗೆ ಬಂದಾಗ ಚಾಲಕ ಷರೀಫ್, ನಿರ್ವಾಹಕ ನೀಲಪ್ಪ ಅವರಿಗೆ ಇವು ಸಿಕ್ಕಿದ್ದವು. ತಕ್ಷಣ ಅವರು ಅವುಗಳನ್ನು ಡಿಪೋ ಮ್ಯಾನೇಜರ್‌ಗೆ ಒಪ್ಪಿಸಿದ್ದರು. ಬ್ಯಾಗ್‌ನಲ್ಲಿ 6,500 ರೂ. ಮತ್ತಿತರ ವಸ್ತುಗಳ ಜತೆಗೆ ಬಸು ಅವರ ಮೊಬೈಲ್ ನಂಬರ್ ಕೂಡ ಇತ್ತು. ಆದ್ದರಿಂದ ಅವರಿಗೆ ಕರೆ ಮಾಡಿ, ಕರೆಸಿದ ಡಿಪೋ ಮ್ಯಾನೇಜರ್ ಎಸ್.ಬಿ. ಪಾಟೀಲ್ ಎರಡೂ ವಸ್ತುಗಳನ್ನು ಒಪ್ಪಿಸಿದ್ದಾರೆ.