ಮಸ್ಕಿಯಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳಗೆ ಕ್ರೀಡಾಪಟುಗಳು ಮನವಿ ಸಲ್ಲಿಸಿದರು. ಪ್ರಮುಖರಾದ ಶಿವಪ್ರಸಾದ ಕಾಯಿ, ಲಕ್ಷ್ಮಣ ಮಡಿವಾಳ, ಗೌಸ್‌ಪಾಷಾ, ಮೋಹನ ಮುರಾರಿ, ರವಿಚಂದ್ರ, ಮಾಸಿನ್, ಸಂಜಯ, ಅಂಜು, ವಸಂತ ಇತರರಿದ್ದರು. 
ಜಿಲ್ಲೆ

ಮಸ್ಕಿಯಲ್ಲಿ ಕ್ರೀಡಾಂಗಣ ನಿರ್ಮಿಸಿ

Kopala - Desk - Eraveni

ಮಸ್ಕಿ: ಪಟ್ಟಣದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಕ್ರೀಡಾಪಟುಗಳು ಗುರುವಾರ ಶಾಸಕ ಆರ್.ಬಸನಗೌಡ ತುರ್ವಿಹಾಳಗೆ ಮನವಿ ಸಲ್ಲಿಸಿದರು.

ಮಸ್ಕಿ ಪಟ್ಟಣ ತಾಲೂಕು ಕೇಂದ್ರವಾಗಿದ್ದು, ಹೆಚ್ಚಿನ ಕ್ರೀಡಾಪಟುಗಳು ಇಲ್ಲಿದ್ದಾರೆ. ಕ್ರೀಡಾಂಗಣದ ಕೊರತೆ ಇದ್ದು, ನಿರ್ಮಾಣಕ್ಕಾಗಿ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಕೂಡಲೇ ಕ್ರಮವಹಿಸಬೇಕೆಂದು ಕೋರಿದರು.

ಶಾಸಕ ಮಾತನಾಡಿ, ಕ್ರೀಡಾಂಗಣ ನಿರ್ಮಾಣಕ್ಕೆ ಬೇಕಾದ ಜಾಗ ಸೇರಿ ಇತರ ವಿಷಯಗಳ ಕುರಿತು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಪ್ರಮುಖರಾದ ಅಶೋಕ ಮುರಾರಿ, ಶಿವಪ್ರಸಾದ ಕಾಯಿ, ಲಕ್ಷ್ಮಣ ಮಡಿವಾಳ, ಗೌಸ್ ಪಾಷಾ, ಮೋಹನ ಮುರಾರಿ, ರವಿಚಂದ್ರ, ಮಾಸಿನ್, ಸಂಜಯ, ಅಂಜು, ವಸಂತ, ಮಲ್ಲಿಕಾರ್ಜುನ, ಮೆಹಬೂಬ್, ಮುತ್ತು, ಮಹಾಂತೇಶ ವಿನೋದ ಇತರರಿದ್ದರು.