ಮಸ್ಕಿ ನಾಲಾ ಜಲಾಶಯಕ್ಕೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಶುಕ್ರವಾರ ಬಾಗಿನ ಅರ್ಪಿಸಿದರು. ಪ್ರಮುಖರಾದ ಶ್ರೀಶೈಲಪ್ಪ ಸಜ್ಜನ, ಬಸಪ್ಪ ಬ್ಯಾಳಿ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಮೆಹಬೂಬ್‌ಸಾಬ್ ಮುದ್ದಾಪುರ ಇತರರಿದ್ದರು. 
ಜಿಲ್ಲೆ

ಮಸ್ಕಿ ಜಲಾಶಯದಿಂದ ರೈತರಿಗೆ ಅನುಕೂಲ

ಮಸ್ಕಿ: ರೈತರು ಗುಳೆ ಹೋಗುವುದನ್ನು ತಪ್ಪಿಸಲು ನೀರಾವರಿ ಯೋಜನೆಗಳು ಸಹಕಾರಿಯಾಗಿವೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ತಾಲೂಕಿನ ಮಾರಲದಿನ್ನಿ ಬಳಿಯ ಮಸ್ಕಿ ನಾಲಾ ಜಲಾಶಯಕ್ಕೆ ಶುಕ್ರವಾರ ಬಾಗಿನ ಅರ್ಪಿಸಿ ಮಾತನಾಡಿದರು. ಮಳೆ ಕೈ ಕೊಟ್ಟ ಸಂದರ್ಭದಲ್ಲಿ ಈ ಭಾಗದ ರೈತರು ಕುಟುಂಬ ಸಮೇತರಾಗಿ ಮಹಾನಗರಗಳಿಗೆ ಗುಳೆ ಹೋಗುತ್ತಿದ್ದರು. ಮಸ್ಕಿ ನಾಲಾ ಅಣೆಕಟ್ಟೆ ನಿರ್ಮಾಣದ ನಂತರ ಮಾರಲದಿನ್ನಿ, ಉಸ್ಕಿಹಾಳ, ಕಾಟಗಲ್, ಮುದಬಾಳ, ದಿನ್ನೆಬಾವಿ, ಬೆಲ್ಲದ ಮರಡಿ, ಬೆನಕನಾಳ, ಮಾರಲದಿನ್ನಿ ತಾಂಡಾ ಸೇರಿ ವಿವಿಧ ಗ್ರಾಮಗಳ ಮೂರು ಸಾವಿರ ಹೆಕ್ಟೇರ್ ಒಣ ಪ್ರದೇಶಕ್ಕೆ ನೀರುಣಿಸುತ್ತಿದ್ದು, ರೈತರಿಗೆ ವರದಾನವಾಗಿದೆ ಎಂದರು. ತಹಸೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ, ನಾಲಾ ಇಂಜಿನಿಯರ್ ಗುರುಮೂರ್ತಿ, ದಾವುದ್, ಪ್ರಮುಖರಾದ ಶ್ರೀಶೈಲಪ್ಪ ಸಜ್ಜನ, ಬಸಪ್ಪ ಬ್ಯಾಳಿ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಮೆಹಬೂಬ್‌ಸಾಬ್ ಮುದ್ದಾಪುರ ಇತರರಿದ್ದರು.