ಮಸ್ಕಿ: ನೇಹಾಳ ಹತ್ಯೆಗೈದ ಫಯಾಜ್‌ಗೆ ಕಠಿಣ ಶಿಕ್ಷೆಗೆ ವಿಧಿಸಲು ಒತ್ತಾಯಿಸಿ ವೀರಶೈವ ಲಿಂಗಾಯತ ಸಮಾಜ, ಬಜರಂಗದಳ, ಎಬಿವಿಪಿ, ಹಿಂದು ಸಮುದಾಯ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದವು.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳುಗುತ್ತಿದೆ. ಕೊಲೆಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈಗಿನ ಸರ್ಕಾರ ಅಲ್ಪಸಂಖ್ಯಾತರ ತುಷ್ಟಿಕರಣದಿಂದಾಗಿ ಕಿಡಿಗೇಡಿಗಳು ಅಟ್ಟಹಾಸ ಮರೆಯುತ್ತಿದ್ದಾರೆ. ಆರೋಪಿ ಫಯಾಜ್‌ಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಒತ್ತಾಯಿಸಿದರು.
ಅತ್ಯಾಚಾರ, ಹತ್ಯೆ, ನಿಂದನೆ ಪ್ರಕರಣಗಳು ಹೆಚ್ಚುತ್ತಿರುವುದು ಸಮಾಜ ತಲೆ ತಗ್ಗಿಸುವಂತಾಗಿದೆ. ಹತ್ಯೆ ಮಾಡಿರುವ ದುಷ್ಕರ್ಮಿಗೆ ಶಿಕ್ಷೆ ವಿಧಿಸಬೇಕು ಎಂದು ಜಂಗಮ ಸಮಾಜದ ಮುಖಂಡ ಶಿವಕುಮಾರ ಎನ್. ಆಗ್ರಹಿಸಿದರು.
ಪ್ರಮುಖರಾದ ಸಿದ್ದಣ್ಣ ಹೂವಿನಬಾವಿ, ಮಲ್ಲಪ್ಪ ಅಂಕುಶದೊಡ್ಡಿ, ಶಿವಪ್ರಸಾದ ಕ್ಯಾತ್ನಟ್ಟಿ, ಶರಣಯ್ಯ ಗುಡದೂರು, ಮಲ್ಲಿಕಾರ್ಜುನ ಪಾಟೀಲ, ಚಂದ್ರಕಲಾ ದೇಶಮುಖ, ಗ್ರಾಮದ ಮುಖಂಡರಾದ ಅಂದಾನಪ್ಪ ಗುಂಡಳ್ಳಿ, ಶಿವಶಂಕ್ರಪ್ಪ ಹಳ್ಳಿ, ಪ್ರಕಾಶ ಧಾರಿವಾಲ, ಪಂಚಾಕ್ಷರಯ್ಯ ಕಂಬಾಳಿಮಠ, ಸಿದ್ದಲಿಂಗಯ್ಯ ಹಿರೇಮಠ, ಘನಮಠದಯ್ಯ ಸಾಲಿಮಠ, ಜಗದೀಶಸ್ವಾಮಿ ಹಾಲಪೂರು, ರಾಕೇಶ ಪಾಟೀಲ, ಯರಿತಾತ ಜಂಗಮರಹಳ್ಳಿ, ಗವಿಸಿದ್ದಪ್ಪ ಸಾಹುಕಾರ ಸಂತೆಕೆಲ್ಲುರು, ಮಂಜುನಾಥ ಬಿಜ್ಜಳ, ಮಲ್ಲಯ್ಯ ಕುಚ್ಚಾ, ಸಿದ್ದಲಿಂಗಯ್ಯ ಸೊಪ್ಪಿಮಠ, ಮೌನೇಶ ನಾಯಕ, ಯಲ್ಲೋಜಿರಾವ್ ಕೊರೆಕರ್, ಸುಗಣ್ಣ ಬಾಳೆಕಾಯಿ, ಶಿವರಾಜ ಯಂಬಲದ, ಶರಣಬಸವ ಹರವಿ, ಶರಣಯ್ಯ ಸೊಪ್ಪಿಮಠ, ಆದಯ್ಯಸ್ವಾಮಿ ಕ್ಯಾತ್ನಟ್ಟಿ, ಮಲ್ಲಿಕಾರ್ಜುನ ನಾಯೆನಗಲಿ, ಪಂಪಣ್ಣ ಕೋಡಿಹಾಳ, ಪೂರ್ಣೀಮಾ ಪಾಟೀಲ, ಪುಷ್ಪಾ ಬಿಜ್ಜಳ, ಯಶೋಧ ಕಡಾಮುಡಿಮಠ, ದುರ್ಗಮ್ಮ, ಕಾವೇರಿ, ಶಾಂತಮ್ಮ ಇತರರಿದ್ದರು.