ಶಿರಸಿ: ತಾಲೂಕಿನ ಬನವಾಸಿಯ ಹಕ್ಕಲ ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಶಿಕ್ಷಕಿ ಪದ್ಮಾ ಹೆಗಡೆ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಐಗಿರಿ ನಂದಿನಿ ಎಂಬ ಗೀತೆಯನ್ನು ತಮ್ಮ ವಿದ್ಯಾರ್ಥಿಗಳೊಂದಿಗೆ ಹಾಡಿ, ಕೊನೆಯದಾಗಿ ಸರ್ವಶಕ್ತಿ ಮಹಾಮಾತೆ ಶಿವಶಂಕರಿ ಎಂಬ ಹಾಡು ಹಾಗೂ ಮಾರಿಕಾಂಬೆ ಕುರಿತ ಹಾಡುಗಳು ಪ್ರೇಕ್ಷಕರಿಗೆ ಸಂಗೀತದೌತಣ ನೀಡಿದರು. ಕಾರ್ಯಕ್ರಮ ಬಳಿಕ ಮಾತನಾಡಿದ ಪದ್ಮಾ ಹೆಗಡೆ, ಈ ದೇವಿಯ ಸಾನ್ನಿಧ್ಯದಲ್ಲಿ ನಮ್ಮ ಚಿಕ್ಕ ಸೇವೆ ಮನಸಿಗೆ ತೃಪ್ತಿ ತಂದಿದೆ ಎಂದರು.
ಜಾತ್ರಾ ಸಮಿತಿ ಪ್ರಮುಖರಾದ ಶಿವಾಜಿ ಬನವಾಸಿ, ಸಿ. ವಸಂತ್ ಇಳಿಗೇರ ಅವರು ಶ್ರೀದೇವಿಯ ಫೋಟೋ ನೀಡಿ ಗೌರವಿಸಿದರು.